ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೋರ್ವಳು ಅನುಮಾನಾಸ್ಪದವಾಗಿ ಅತ್ಮಹತ್ಯೆಗೆ ಶರಣಾದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಹಟ್ಟಿಕೇರಿ ಗ್ರಾಮದ(Hattikeri Villlage) ರಮ್ಯಾ ಸಂಕೇತ ಆಚಾರಿ(24) ಎಂಬಾಕೆಯೆ ಸಾವನ್ನಪ್ಪಿದ ಗೃಹಿಣಿಯಾಗಿದ್ದಾಳೆ. ಹೊನ್ನಾವರ(Honnavar) ತಾಲ್ಲೂಕಿನ ಮುಗ್ವಾ ಮೂಲದ(Mugva Native) ರಮ್ಯಾ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದ ಸಂಕೇತ ಆಚಾರಿ ಎಂಬುವವರನ್ನು ಪ್ರೀತಿಸಿದ್ದಳು, ಬಳಿಕ ಕಳೆದ ಏಪ್ರಿಲ್ 21 ರಂದು ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದಳು. ಮದುವೆಯಾದ ಬಳಿಕ ದಂಪತಿಗಳು ಅಂಕೋಲಾದ(Ankola) ಹಟ್ಟಿಕೇರಿಯಲ್ಲೇ ವಾಸಿಸುತ್ತಿದ್ದರು.
ನಿನ್ನೆ ಬೆಳಿಗ್ಗೆ 10 ರಿಂದ 11 ಗಂಟೆಯ ವೇಳೆಯಲ್ಲಿ ರಮ್ಯಾ ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಳು ಎನ್ನಲಾಗಿದೆ. ತಕ್ಷಣ ಪತಿ ಸಂಕೇತ ಆಚಾರಿ ಅವಳನ್ನು ಅಂಕೋಲಾ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ಸಾವಿಗೆ ಸಂಬಂಧಿಸಿ ಮೃತೆಯ ತಂದೆ ಗಣೇಶ ಮನು ಆಚಾರಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ದೂರು ದಾಖಲಿಸಿದ್ದಾರೆ. ಮಗಳ ಅಕಾಲಿಕ ಹಾಗೂ ಅಸಹಜ ಸಾವಿನಲ್ಲಿ ಸಂಶಯವಿದೆ. ಹೀಗಾಗಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಸಿಎಂ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆಗೆ ಯತ್ನ. ಪೊಲೀಸರ ವಶಕ್ಕೆ.