ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಸಿದ್ದಾಪುರ(Siddapura) : ತಾಲೂಕಿನ ನಿಲ್ಕುಂದ ಫಾಲ್ಸ್ ನೋಡಲು ಹೋದ ಯುವಕರ ತಂಡದಿಂದ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ(Body Found).
ಶಿರಸಿ(Sirsi) ತಾಲೂಕಿನ ಅಕ್ಷಯ ಪರಮೇಶ್ವರ ಭಟ್ (22), ಮರಾಠಿಕೊಪ್ಪದ (Maratikoppa) ಜೋಡಕಟ್ಟೆ ನಿವಾಸಿ ಸುಹಾಸ ಶೆಟ್ಟಿ (22) ಮೃತ ದುರ್ದೈವಿಗಳು. ಶುಕ್ರವಾರ ಸಂಜೆ ಶಿರಸಿಯಿಂದ ಆರು ಜನರ ತಂಡ ಸಿದ್ದಾಪುರ – ಕುಮಟಾ ರಸ್ತೆಯ(Siddapur-Kumta Road) ಪಕ್ಕದ ನಿರ್ಜನ ಪ್ರದೇಶದಲ್ಲಿರುವ ನೀಲ್ಕುಂದ ಗ್ರಾಮದ(Nilkunda Village) ವಾಟೆಹೊಳೆ ಫಾಲ್ಸ್ ಗೆ(vatehole Falls) ಹೋಗಿದ್ದರು. ಸಂಜೆ ನೀರಲ್ಲಿ ಆಟವಾಡುವಾಗ ಅಕ್ಷಯ್ ಮತ್ತು ಸುಹಾಸ್ ಕಾಲು ಜಾರಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು. ವಿಷಯವನ್ನ ಉಳಿದ ಯುವಕರು ಮನೆಗೆ ಬಂದು ತಿಳಿಸಿದಾಗ ಘಟನೆ ನಡೆದಿರೋದು ಗೊತ್ತಾಗಿದೆ.
ಶಿರಸಿ ಡಿವೈಎಸ್‌ಪಿ ಕೆ. ಎಲ್. ಗಣೇಶ, ಸಿದ್ದಾಪುರ ಇನಸ್ಪೆಕ್ಟರ್ ಜೆ. ಬಿ. ಸೀತಾರಾಮ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದರು. ರಾತ್ರಿ 9-30ರ ಸುಮಾರಿಗೆ ಇಬ್ಬರ ಮೃತದೇಹ ಮೇಲಕ್ಕೆ ತೆಗೆಯಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ(Siddapura Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ಲೋಕಾಯುಕ್ತ ದಾಳಿ.ನಗರ ಯೋಜಕ ಸದಸ್ಯ ಬಲೆಗೆ