ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ/ಸಿದ್ದಾಪುರ(Haliyal/Siddapura) : ಉತ್ತರಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ(Lokayukta Raid) ನಡೆಸಿದ್ದಾರೆ.

ಭ್ರಷ್ಟಾಚಾರ(Corruption) ಹಾಗೂ ಅಕ್ರಮ ಆಸ್ತಿ(Illegal Property) ಹೊಂದಿದ ಆರೋಪದಡಿ ಮಾರುತಿ ಯಶವಂತ್ ಮಾಲ್ವಿ ಎಂಬ ಅಧಿಕಾರಿಗೆ ಸೇರಿದ ಮನೆ, ಕಚೇರಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಸಿದ್ದಾಪುರ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ(Siddapura kolasirsi Group Grama Seva Sahakari Sangha) ಸಿಇಒ ಆಗಿರುವ ಮಾರುತಿ ಯಶವಂತ್ ಮಾಲ್ವಿ ಅವರ ಸಿದ್ದಾಪುರದಲ್ಲಿರುವ(Siddapura) ಕಚೇರಿ ಹಾಗೂ ಹಳಿಯಾಳದಲ್ಲಿರುವ(Haliyal) ನಿವಾಸದ ಮೇಲೆ ಬೆಳಿಗ್ಗೆ ಬೆಳಂಬೆಳಗ್ಗೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿವೆ. ಜೊತೆಗೆ ಹಳಿಯಾಳದಲ್ಲಿರುವ ಅವರ ಬಟ್ಟೆ ಅಂಗಡಿಯ ಮೇಲೆಯೂ ಶೋಧ ಕಾರ್ಯ ನಡೆಯುತ್ತಿದೆ.
ಲಭ್ಯವಿರುವ ಮಾಹಿತಿಯಂತೆ, ಅಕ್ರಮ ಆಸ್ತಿ ಹಾಗೂ ನಗದು ಹೊಂದಿರುವ ಆರೋಪದಡಿ ಒಟ್ಟು ನಾಲ್ಕು ಕಡೆ ದಾಳಿ ನಡೆದಿದೆ. ಹಳಿಯಾಳದಲ್ಲಿ ಎರಡು ಸ್ಥಳಗಳು ಹಾಗೂ ಸಿದ್ದಾಪುರದ ಎರಡು ಸ್ಥಳದಲ್ಲಿ ಲೋಕಾಯುಕ್ತ ಅಧಿಕಾರಿಗಳು(Lokayukta Officer) ಪರಿಶೀಲನೆ ನಡೆಸುತ್ತಿದ್ದಾರೆ.
ಉಡುಪಿ(Udupi), ಮಂಗಳೂರು(Mangalore) ಹಾಗೂ ಕಾರವಾರದಿಂದ(Karwar) ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ವಿವಿಧ ತಂಡಗಳು ಈ ದಾಳಿಯಲ್ಲಿ ಭಾಗವಹಿಸಿದ್ದು, ದಾಖಲೆಗಳು, ನಗದು ಹಾಗೂ ಇತರ ಆಸ್ತಿ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಶೋಧ ಕಾರ್ಯ ಮುಂದುವರಿದಿದ್ದು, ದಾಳಿಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಇದನ್ನು ಓದಿ : ಕಾರವಾರದಲ್ಲಿ ಕರಾವಳಿ ಉತ್ಸವಕ್ಕೆ ವರ್ಣರಂಜಿತ ಚಾಲನೆ. ಮೊದಲ ದಿನವೇ ಜನಸಾಗರ.
