ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapura) : ರಾಷ್ಟ್ರೀಯ ಹೆದ್ದಾರಿ 58 ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ(Arebail Gjat) ಪ್ರದೇಶದಲ್ಲಿ ಲಾರಿಯೊಂದು ಅಪಘಾತಗೊಂಡ ಬಳಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.
ಚಿಕ್ಕೋಡಿಯಿಂದ ಕೇರಳ(Chikkodi to Keral) ಕಡೆಗೆ ಎಥೆನಾಲ್(Ethenal) ತುಂಬಿಕೊಂಡು ತೆರಳುತ್ತಿದ್ದ ಲಾರಿ ನಿಯಂತ್ರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಅತಿ ವೇಗವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಎಥನಾಲ್ ತುಂಬಿದ್ದ ಕಾರಣ ಡಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ಲಾರಿಯಲ್ಲಿ ಬೆಂಕಿ(Lorry fire) ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಇಡೀ ಲಾರಿಯನ್ನು ಆವರಿಸಿಕೊಂಡಿತು. ಭಾರಿ ಬೆಂಕಿಯ ಜ್ವಾಲೆಯಿಂದಾಗಿ ಲಾರಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಲಾರಿಯ ಚಾಲಕ ಆಂಧ್ರಪ್ರದೇಶ ಮೂಲದ ಶ್ರೀನಿವಾಸ್ ರೆಡ್ಡಿ ತಕ್ಷಣವೇ ವಾಹನದಿಂದ ಹೊರಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕೆ ಯಲ್ಲಾಪುರ ಪೊಲೀಸರು(Yallapura Police) ಮತ್ತು ಅಗ್ನಿಶಾಮಕ ದಳ(Fire Brigade) ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಹೆದ್ದಾರಿಯಲ್ಲಿ ಸಂಚಾರ ಆರಂಭಗೊಂಡಿದೆ. ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ(Yallapur Police Station) ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : ನಕಲಿ ಆದೇಶ ವೈರಲ್. ನಾಳೆ ಸಾಲು ಮರದ ತಿಮ್ಮಕ್ಕ ಅವರಿಗೆ ಸರ್ಕಾರಿ ಗೌರವ.
ಆಕ್ಷಿಜನ್ ಕೊಟ್ಟು ಮರೆಯಾದ ಅಜ್ಜಿ. ಸಾಲು ಮರದ ತಿಮ್ಮಕ್ಕ ಇನ್ನೂ ನೆನಪು ಮಾತ್ರ.
ರಾತ್ರಿ ಉಪನಿರ್ದೇಶಕಿ ವಾಹನ ಹಿಂಬಾಲಿಸಿದ ಮರಳು ಸಾಗಾಟದಾರರು. ಹೊನ್ನಾವರದಲ್ಲಿ ನಡೆದ ಘಟನೆ.
ಕಾರವಾರದಲ್ಲಿ ಭೀಕರ ಅಪಘಾತ. ಓರ್ವನ ದುರ್ಮರಣ. ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಗಂಭೀರ.

