ಭಟ್ಕಳ(BHATKAL) : ತಾಲೂಕಿನ ಎರಡು ಕಡೆಗಳಲ್ಲಿ ಹೆಜ್ಜೇನು ದಾಳಿ ಮಾಡಿದ ಘಟನೆ ವರದಿಯಾಗಿದೆ. ಜಾಲಿಕೋಡಿ(Jalikodi) ಮತ್ತು ಶಿರಾಲಿಯ ಬಂಗಾರಮಕ್ಕಿ(SHIRALI Bangaramakki) ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಚ್ಚೇನು ದಾಳಿ ನಡೆಸಿವೆ. ಮಾಸ್ತಮ್ಮ ಮಂಜಪ್ಪ ನಾಯ್ಕ (70), ಜಾನಕಿ ನಾಯ್ಕ (37) ಮತ್ತು ಸುರೇಶ ನಾಯ್ಕ (45) ಹೆಚ್ಚೇನು ದಾಳಿಗೊಳಗಾದವರು. ಏಕಾಏಕಿ ಬಂದ ಹೆಜ್ಜೇನು ಮನೆಯ ಒಳಗಡೆ ಇದ್ದ ಮೂವರ ಮೇಲೆ ದಾಳಿ ಮಾಡಿದ್ದರಿಂದ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ(Bhatkal Government Hospital) ದಾಖಲಿಸಲಾಗಿದೆ. ಇವರಲ್ಲಿ 70 ವರ್ಷದ ವೃದ್ದೆ ಸ್ಥಿತಿ ಗಂಭೀರವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಐ.ಸಿ.ಯು.ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಾಲಿ ಮಲ್ಲಾರಿ ನಿವಾಸಿ ಗಣಪತಿ ಮಂಜಯ್ಯ ನಾಯ್ಕ (೫೫) ಮಲ್ಲಾರಿಯ ತಮ್ಮ ಮನೆಯಿಂದ ಮಾರುಕಟ್ಟೆಗೆಂದು ಬರುತ್ತಿದ್ದ ವೇಳೆ ಬಂಗಾರಮಕ್ಕಿ ಕ್ರಾಸ್ ಬಳಿ ಹೆಜ್ಜೇನು ದಾಳಿ ಮಾಡಿದೆ. ಅವರನ್ನ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ : ನವೆಂಬರ್ 20,ರಂದು ಮದ್ಯದಂಗಡಿ ಬಂದ್
ಕಣ್ಮರೆಯಾಗಿದ್ದ ಬಾಲಕ ಸಿಕ್ಕಿದ್ದಾನೆ