ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಾಲೂಕಿನ ಮಂಕಿ ಪಟ್ಟಣ ಪಂಚಾಯತ್(Manki Pattana Panchayat) ಮೊದಲ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 20 ಸ್ಥಾನಗಳ ಪೈಕಿ ಬಿಜೆಪಿ(BJP) 12 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರುವತ್ತ ಮುನ್ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್(Congres) ಪಕ್ಷಕ್ಕೆ ಕೇವಲ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿ ಬಂದಿದ್ದು, ಆಡಳಿತ ಪಕ್ಷಕ್ಕೆ ಈ ಫಲಿತಾಂಶ ಭಾರೀ ಆಘಾತ ತಂದಿದೆ.

ವಿಶೇಷವೆಂದರೆ, ಮಂಕಿ ಪಟ್ಟಣ ಪಂಚಾಯತ್ ಉಸ್ತುವಾರಿ ಸಚಿವ(District Minister) ಹಾಗೂ ಕಾಂಗ್ರೆಸ್ ನಾಯಕ ಮಂಕಾಳ ವೈದ್ಯರ(Mankal Vaidya) ಕ್ಷೇತ್ರ ‌ವ್ಯಾಪ್ತಿಯಲ್ಲಿ ಬರುತ್ತಿದೆ.  ಕಾಂಗ್ರೆಸ್ ಕಾರ್ಯಕರ್ತರ ಡಬಲ್ ಗೇಮ್ ರಾಜಕೀಯದಿಂದ(Congress Worrker )   ಮತದಾರರು ಬಿಜೆಪಿ ಪರ ಸ್ಪಷ್ಟ ತೀರ್ಮಾನ ಕೈಗೊಂಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಂಕಿ ಪಟ್ಟಣ ಪಂಚಾಯತ್ ತನ್ನ ಮೊದಲ ಚುನಾವಣೆಯಲ್ಲೇ ಬಿಜೆಪಿ ಜಯಭೇರಿ ಬಾರಿಸಿರುವುದು ಸ್ಥಳೀಯ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯುವಂತೆ ಮಾಡಿದೆ. ಕಾಂಗ್ರೆಸ್ ಪಾಲಿಗೆ ಈ ಸೋಲು ಗಂಭೀರ ಆತ್ಮಾವಲೋಕನಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ಕೈಗಾ ಉದ್ಯೋಗಿ ಲೈವ್ ಸೂಡ್. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ.*

ಕಾರವಾರದಲ್ಲಿ ಮಹಿಳೆಯ ಸಾವಾದ ಕೊಲೆ. ಪೊಲೀಸರಿಂದ ತನಿಖೆ.