ಕಾರವಾರ(KARWAR) : ಪಶ್ಚಿಮಬಂಗಾಳದ(PASCHIM BANGAL) ಕೋಲ್ಕತ್ತಾ(KOLKATTA)ದ ವೈದ್ಯಕೀಯ ಸಂಸ್ಥೆಯಲ್ಲಿ ದುಷ್ಕರ್ಮಿಗಳು ನಡೆಸಿದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಕಾರವಾರ ಮಹಿಳಾ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಕಾರವಾರ ನಗರಸಭೆ ಗಾಂಧಿ ಉದ್ಯಾವನದಲ್ಲಿ ಗಾಂಧೀಜಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ನಗರದ ಮುಖ್ಯ ಮಾರ್ಗವಾಗಿ ಶಿವಾಜಿ ಸರ್ಕಲ್, ಹೆಂಜಾ ನಾಯ್ಕ, ಸವಿತಾ ಸರ್ಕಲ್ನಿಂದಾ ಸುಭಾಷ್ ಚಂದ್ರ ಬೋಸ್ ಸರ್ಕಲ್ ವರೆಗೆ ಮೇಣದಬತ್ತಿ ಉರಿಸಿ ಮೌನ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯ ಜನತಾ ಪಕ್ಷ ಕಾರವಾರ ನಗರ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾ ವತಿಯಿಂದ ನಗರಧ್ಯಕ್ಷ ನಾಗೇಶ್ ಕುರುಡೇಕರ್ ನೇತೃತ್ವದಲ್ಲಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೈಶಾಲಿ ತಾಂಡೆಲ್, ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ನಾಯ್ಕ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಜಿಲ್ಲಾ ಪ್ರಮುಖರು, ಮಹಿಳಾ ಪದಾಧಿಕಾರಿಗಳು, ಮಹಿಳಾ ಮೋರ್ಚಾ ತಂಡದವರು, ಜನಪ್ರತಿನಿಧಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.