ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮಂಗಳೂರು(Mangalore) : ಆನ್ಲೈನ್ ಮ್ಯಾಟ್ರಿಮೋನಿ(Online Matrimony) ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು(Mangalore Police) ಬಂಧಿಸಿದ್ದಾರೆ.
ಒಟ್ಟು 9 ಯುವತಿಯರ ಬದುಕಿನಲ್ಲಿ ಆಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’ ಸುಶಾಂತ್ ಪೂಜಾರಿ ಹಾಗೂ ಅವನಿಗೆ ಸಾಥ್ ನೀಡಿದ್ದ ಮೂಲ್ಕಿ ನಿವಾಸಿ(Mulki Native) ಭಾಸ್ಕರ್ ಪೋಸರಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಆನ್ಲೈನ್ ಮ್ಯಾಟ್ರಿಮೋನಿ(Online Matrimony) ತಾಣಗಳ ಮೂಲಕ ಪರಿಚಯವಾಗುತ್ತಿದ್ದ ಸುಶಾಂತ್ ಪೂಜಾರಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದನು. ಒಂದಲ್ಲ, ಎರಡಲ್ಲ, ಬರೋಬ್ಬರಿ 9 ಯುವತಿಯರು ಈತನ ಮೋಸಕ್ಕೆ ಒಳಗಾಗಿದ್ದಾರೆ. ಈ ಪೈಕಿ ಇಬ್ಬರನ್ನು ಮದುವೆಯಾದ ನಂತರ ಕೈಬಿಟ್ಟಿದ್ದಾನೆ ಎನ್ನಲಾಗಿದೆ.
ಮುಂಬೈನೊಬ್ಬ ಸಂತ್ರಸ್ತೆಯನ್ನು ಮದುವೆಯಾಗಿ ಹಂತ ಹಂತವಾಗಿ ಸುಮಾರು 6.6 ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿದ್ದಾನೆ. ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ(Kavooru Police Station) ದೂರು ದಾಖಲಾಗಿತ್ತು.
ವಿವಿಧ ನಗರಗಳಲ್ಲಿ ವಂಚನೆ : ಪೊಲೀಸ್ ವಿಚಾರಣೆಯಲ್ಲಿ ಆರೋಪಿ ನಡೆಸಿದ್ದ ವಂಚನೆಗಳ ಸರಮಾಲೆ ಬಯಲಾಗಿದೆ. 2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಉಡುಪಿಯ(Udupi) ಯುವತಿಯನ್ನು ಮದುವೆಯಾಗಿದ್ದನು. ಉಡುಪಿ ಭಾಗದ ಇನ್ನಿಬ್ಬರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದನು. ಮುಂಬೈನ(Mumbai) ಇಬ್ಬರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಪರಾರಿಯಾಗಿದ್ದನು. ಬೆಂಗಳೂರಿನಲ್ಲಿ(Bangalore) ಇಬ್ಬರು ಯುವತಿಯರಿಗೆ ಮದುವೆಯ ಆಮಿಷ ನೀಡಿ ಮೋಸ ಮಾಡಿದ್ದನು. ಕಾರ್ಕಳದ(Karkal) ಯುವತಿಯೋರ್ವಳನ್ನೂ ಇದೇ ರೀತಿಯಲ್ಲಿ ವಂಚಿಸಿದ್ದಾನೆಂಬುದು ಗೊತ್ತಾಗಿದೆ.
ನಕಲಿ ‘ಮಾವ’ನ ಸಹಕಾರ : ಸುಶಾಂತ್ ಪೂಜಾರಿಗೆ ಸಾಥ್ ನೀಡಿದ್ದ ಭಾಸ್ಕರ್ ಪೋಸರಿ, “ಸುಶಾಂತ್ ನನ್ನ ಅಳಿಯ” ಎಂದು ಸಂತ್ರಸ್ತೆ ಹಾಗೂ ಅವರ ಕುಟುಂಬದವರನ್ನು ನಂಬಿಸುತ್ತಿದ್ದನು. ನಂಬಿಕೆ ಮೂಡಿಸಲು ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ. ಕೆಲ ಸಂದರ್ಭಗಳಲ್ಲಿ ತಾನೇ ಮುಂದೆ ನಿಂತು ಮದುವೆ ನೆರವೇರಿಸಿದಂತೆ ನಟನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಕಾವೂರು ಪೊಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಆನ್ಲೈನ್ ಮ್ಯಾಟ್ರಿಮೋನಿ(Online Matrimony) ತಾಣಗಳ ಮೂಲಕ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ಸಮಗ್ರ ಮಾಹಿತಿ ಪರಿಶೀಲಿಸದೆ ನಂಬಿಕೆ ಇಡುವುದು ಅಪಾಯಕಾರಿ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : ರಾಘವೇಂದ್ರ ಜಿ. ಪ್ರಭು ಅವರಿಗೆ ಎಕ್ಸ್ಟ್ರೋರ್ಡಿನರಿ ಅಸಿಸ್ಟಂಟ್ ಗವರ್ನರ್ ಅವಾರ್ಡ್
ಪೊಲೀಸರ ಕಾರ್ಯಾಚರಣೆ. ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ.
ಮದುವೆಗೆ ಚಿನ್ನ ಖರೀದಿಸಲು ಬಂದು ನಾಪತ್ತೆಯಾದ ಯುವಕ. ವಿದೇಶದಲ್ಲಿದ್ದವ ಕೂಲಿಯಾಗಿದ್ದೇಕೆ?
