ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ತಿರುವನಂತಪುರಂ(Tiruvanantpuram): ಹದಿನಾಲ್ಕನೇ ಬಾರಿ ಮದುವೆಯಾಗಲು(Marriage) ತಯಾರಾಗಿದ್ದ ಖತರನಾಖ್ ಯುವತಿಯೊಬ್ಬಳನ್ನ ಬಂಧಿಸಿದ ಘಟನೆ ನಡೆದಿದೆ.

ಎರ್ನಾಕುಲಂನ(Ernakulam) ಕಂಜಿರಮಟ್ಟಂ ಮೂಲದ ರೇಷ್ಮಾ (30) ಎಂಬಾಕೆಯನ್ನು ಆರ್ಯನಾಡು ಪೊಲೀಸರು ನಾಟಕೀಯ ಶೈಲಿಯಲ್ಲಿ(Drama Style) ಬಂಧಿಸಿದ್ದಾರೆ. ಈಕೆ  ಈಗಾಗಲೆ 10 ಕ್ಕೂ ಅಧಿಕ ಮದುವೆಯಾಗಿ ವಂಚನೆಗೈದಿದ್ದಳು.

ಹದಿನಾಲ್ಕನೆ  ಮದುವೆಯಾಗಲು  ರೇಷ್ಮಾ ತಯಾರಾಗಿದ್ದಾಗ  ಆಕೆಯ ಭಾವಿ ಪತಿಯೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದ.  ಕಲ್ಯಾಣ ಮಂಟಪಕ್ಕೆ ತಾಳಿ ಕಟ್ಟಲು ನೇರವಾಗಿ ಹೋಗುತ್ತಿರುವ   ವೇಳೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ರೇಷ್ಮಾ ತಾನು ಹಲವು ಬಾರಿ ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದಾಳೆ. ಒಂದು ಸಂಬಂಧದಲ್ಲಿ ಆಕೆಗೆ ಮಗುವೂ ಇದೆ ಎನ್ನಲಾಗಿದೆ.

ತಾನು ಅನಾಥೆ ಎಂದು ವರನ ಕುಟುಂಬದವರಿಗೆ ಪರಿಚಯಿಸುವ ಮೋಸದ ನಾಟಕವಾಡುತ್ತಿದ್ದಳು. ಮದುವೆಗೆ ತನ್ನ ಬಟ್ಟೆ ಮತ್ತು ಚಿನ್ನವನ್ನು ವರನಿಂದಲೇ ಖರೀದಿಸುತ್ತಿದ್ದ ಆಕೆ, ಮದುವೆಯಾದ ಕೆಲವೇ ದಿನಗಳಲ್ಲಿ ಚಿನ್ನಾಭರಣ, ವಸ್ತ್ರಗಳೊಂದಿಗೆ ಎಸ್ಕೇಪ್ ಆಗುತ್ತಿದ್ದಳು.

ನಂತರ ಒಂದೆರಡು ತಿಂಗಳುಗಳ ಬಳಿಕ ಆಕೆ ಮತ್ತೆ ಬೇರೆ ವರನೊಂದಿಗೆ ಮದುವೆಗೆ ತಯಾರುಗುತ್ತಿದ್ದಳು. ರೇಷ್ಮಾಳ ಮೊದಲ ಮದುವೆ 2014 ರಲ್ಲಿ ನಡೆದಿದ್ದು, 2022 ರಿಂದ ಆಕೆ ವಿವಿಧ ಜಿಲ್ಲೆಗಳಲ್ಲಿ ಆರು ಜನರನ್ನು ಮದುವೆಯಾಗಿದ್ದಾಗಿ ಗೊತ್ತಾಗಿದೆ.

ವಿವಾಹ ಆಗುವ  ಪ್ರತಿ ವರನಿಗೆ,  ಅನಾಥ ಕಥೆಯನ್ನು ಹೇಳುತ್ತಿದ್ದಳು. ತಾನು ಹಣದ ಆಸೆಯಿಂದ ಮದುವೆಯಾಗುತ್ತಿಲ್ಲ, ಪ್ರೀತಿಯ ಹುಡುಕಾಟವೇ ತನ್ನನ್ನು ಹಲವು ಬಾರಿ ಮದುವೆಯಾಗುವಂತೆ ಪ್ರೇರೆಪಿಸಿದೆ  ಎಂದು ರೇಷ್ಮಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಆದರೆ ಆಕೆಯ  ಹೇಳಿಕೆಗಳನ್ನು ಪೊಲೀಸರು ನಂಬುತ್ತಿಲ್ಲ.

45 ದಿನಗಳ ಹಿಂದಷ್ಟೇ ಈಕೆ ಮದುವೆಯಾಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ವಂಚಿಸಿ  ಪಂಚಾಯತ್ ಸದಸ್ಯನನ್ನು(Panchayat Member) ಮದುವೆಯಾಗಲು ಮುಂದಾಗಿದ್ದಳು.  ಆಘಾತಕಾರಿ ಸಂಗತಿಯೆಂದರೆ, ಜುಲೈನಲ್ಲಿ ತಿರುವನಂತಪುರಂ(Tiruvanantapuram) ಮೂಲದ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಕೂಡಾ ಆಕೆ ಎಲ್ಲಾ  ಪೂರ್ವ ತಯಾರಿ ಮಾಡಿಕೊಂಡಿದ್ದಳು ಎಂದು ಬಯಲಿಗೆ ಬಂದಿದೆ.

ಆಕೆಯ ನಡೆಯ ಬಗ್ಗೆ ಅನುಮಾನ ಬಂದು ಭಾವೀ ಪತಿ ಮತ್ತು ಆತನ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನು ಓದಿ : ಚಾಕು ನುಂಗಿದ ನಾಗರ.  ಅಪಾಯದಿಂದ ಪಾರು ಮಾಡಿದ ಸ್ನೇಕ್ ಪವನ್.