ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ (Kumta): ಆಹಾರ ಹುಡುಕಿ ಬಂದ ನಾಗರ ಹಾವೊಂದು ಚಾಕು ನುಂಗಿ ಚಡಪಡಿಸಿದ ಘಟನೆ ಕುಮಟಾ(Kumta) ತಾಲೂಕಿನ ಹೆಗಡೆ(Hegade) ಗ್ರಾಮದಲ್ಲಿ ನಡೆದಿದೆ.
ಗೋವಿಂದ ನಾಯ್ಕ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಹಾವಿಗೆ ಜೀರ್ಣಿಸಲು ಸಾಧ್ಯವಾಗದೆ, ಹೊರಕ್ಕೂ ಹಾಕಲಾರದೇ ವಿಲವಿಲ ಒದ್ದಾಡಿದೆ. ಗೋವಿಂದ ನಾಯ್ಕರ ಅಡುಗೆ ಮನೆಯ ಗೋಡೆಯಲ್ಲಿದ್ದ ಚಾಕು ಹೇಗೋ ಹೊರಕ್ಕೆ ಬಿದ್ದಿದ್ದು ಅಲ್ಲಿ ಹಾವು ಓಡಾಡುತ್ತಿದ್ದರಿಂದ ಹೊರಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲೇ ಚಾಕು ಕಣ್ಮರೆಯಾಯಿತು. ಅಲ್ಲೇ ಹಾವು ಕೂಡ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿದ್ದು, ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ನೀಡಿದ್ದರೂ ಹಾವು ಹೋಗಿರುವುದಿಲ್ಲ. ಚಾಕು ಇಲ್ಲದಿದ್ದದ್ದನ್ನು ಮನೆಯವರು ಸಂಶಯಗೊಂಡರು.
ಅನುಮಾನದಿಂದಲೇ ಉರಗ ಪ್ರೇಮಿ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಿ ಅದು ಚಾಕು ನುಂಗಿದೆ, ಹಾಗೂ ಚಾಕುವಿನ ತುದಿ ಎದೆಯ ಹತ್ತಿರ ಸಿಲುಕಿದ್ದು ಹೊರ ಹಾಕಲು ಒದ್ದಾಡುತ್ತಿರುವುದು ಗೊತ್ತಾಗಿದೆ. ಹೇಗಾದರೂ ಮಾಡಿ ಚಾಕು(Knife) ಹೊರತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ಪವನ್ ಅವರು ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ಹೋಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ.
ಬಳಿಕ ಹಾವನ್ನು(Snake) ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಿದ್ದಾರೆ. ಸಾಮಾನ್ಯವಾಗಿ ಇಲಿ, ಕೋಳಿ ಮೊಟ್ಟೆಗಳನ್ನ ಹೊಟ್ಟೆಗೆ ಇಳಿಸಿಕೊಳ್ಳುತ್ತಿರುವ ನಾಗರ ಈ ರೀತಿಯಾಗಿ ಚಾಕು ನುಂಗಿರೋದು ಮಾತ್ರ ವಿಚಿತ್ರವಾಗಿದೆ.
ಇದನ್ನು ಓದಿ : ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ.
ದಾಂಡೇಲಿಯ ಮನೆಯೊಂದರಲ್ಲಿ ಸಿಕ್ಕ ಮಹಿಳೆಯ ಮೃತದೇಹ
ಖ್ಯಾತ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮದುವೆಯಾಗಿದ್ದೇನೆ. ಅಭಿಮಾನಿಗಳ ತಲೆ ಕೆಡಿಸಿದ ಬಾಲಿವುಡ್ ನಟಿ.