ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಜಿಲ್ಲಾಉಸ್ತುವಾರಿಸಚಿವಮಂಕಾಳ ವೈದ್ಯ(Mankal Vaidya)ವಿರುದ್ದ ಕಾರವಾರದಲ್ಲಿ  ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲ್ಸೆ ತೀವೃ ವಾಗ್ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ(Sharavati Pumped Storage Project) ಜಾರಿ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DCM D K Shivakumar) ಅವರು ಮಾತನಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಹೇಳಿದ್ದರೇ,  ಅವರದೇ  ಕಾಂಗ್ರೆಸ್ ಪಕ್ಷದ(Congress Party) ನಾಯಕರೇ ಡಿಸಿಎಂ ಹೇಳಿದ್ದನ್ನು ಒಪ್ಪಿಕೊಂಡಿರುವುದು ಸಚಿವರ ದಗಲಬಾಜಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಕಿವಿ ಇದ್ದರೂ ಕಿವುಡರಾಗಿರುವ ಸಚಿವರಿಗೆ ಉಚಿತವಾಗಿ ತೆಂಗಿನಎಣ್ಣೆ(Coconut Oil) ಕೊಡುತ್ತೇನೆ, ಅದನ್ನು ಹಾಕಿಕೊಂಡು ಸರಿಯಾಗಿ  ಸರಿಯಾಗಿ ಕೇಳಿಸಿಕೊಳ್ಳಲಿ ಎಂದು‌  ಎಣ್ಣೆ ಬಾಟಲಿ ತೋರಿಸಿದ್ದಾರೆ.

ಕಾರವಾರದಲ್ಲಿ ನಡೆದ ಕರಾವಳಿ ಉತ್ಸವಕ್ಕೆ(Karavali Utdav) ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DCM D K Shivakumar) ಅವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ(Sharavati Pumped Storage Project) ಜಾರಿಗೊಳಿಸುವುದಾಗಿ ಹೇಳಿದಾಗ  ಪಕ್ಕದಲ್ಲಿ ಕುಳಿತಿದ್ದ ಸಚಿವ ಮಂಕಾಳ ವೈದ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು. ಹೀಗಾಗಿ ಹೊನ್ನಾವರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಾನು ಅದನ್ನೇ ಹೇಳಿದ್ದೇನೆ. ಈಗ ಬ್ಲಾಕ್ ಕಾಂಗ್ರೆಸ್(Block Congress) ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದನ್ನೇ ಹೇಳುವ ಮೂಲಕ ತಮ್ಮ ಸಚಿವರು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ದಗಲಬಾಜಿ  ಯಾರು ಎಂಬುದನ್ನು ಸಚಿವರೇ ಹೇಳಬೇಕು ಎಂದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 13-05-2016ರಂದು ಡಿಪಿಆರ್ ಸಿದ್ಧಪಡಿಸಲು ಕಾಂಗ್ರೆಸ್ ಸರ್ಕಾರ(Congress Government) ಖಾಸಗಿ ಕಂಪನಿಗೆ ಹೊಣೆ ನೀಡಿತ್ತು. ಆಗ ಮಂಕಾಳ ವೈದ್ಯರೇ  ಶಾಸಕರಾಗಿದ್ದರು. ಡಿಪಿಆರ್ ಸಿದ್ಧಪಡಿಸುವಾಗಲೇ ಅಂದಿನ ಶಾಸಕರಾಗಿದ್ದ ವೈದ್ಯ ಅವರು ವಿರೋಧಿಸಬಹುದಿತ್ತು. ಆದರೆ ಹಾಗೆ ಮಾಡದೇ ಈಗ ಬೇರೆಯವರನ್ನು ದಗಲಬಾಜಿ ಎಂದು ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ಹೊನ್ನಾವರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮೂವರು ಸ್ವಾಮೀಜಿಗಳ ಎದುರು ಸಚಿವರು ದಗಲಬಾಜಿ ಮಾತುಗಳನ್ನಾಡಿದ್ದಾರೆ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂಬ ಪರಿಜ್ಞಾನ ಅವರಿಗೆ ಇರಲಿಲ್ಲವೇ ಎಂದ ಪ್ರಶ್ನಿಸಿದ ಮಾಸ್ತಪ್ಪ ನಾಯ್ಕ,   ಸಚಿವರು ಭಟ್ಕಳ ಅರ್ಬನ್ ಬ್ಯಾಂಕ್‌ನ(Bhatkal Urban Bank) ಮೃತ ವ್ಯಕ್ತಿಯ ಹೆಸರಿನಲ್ಲಿದ್ದ ಶೇರುಗಳನ್ನು ಪಡೆದು ತಮ್ಮ ಪುತ್ರಿಗೆ ನಿರ್ದೇಶಕ ಸ್ಥಾನ ನೀಡಿದ್ದಾರೆ. ಇದು ದಗಲಬಾಜಿ ಕೆಲಸ ಅಲ್ಲವೇ ಎಂದು ಖಾರವಾಗಿ‌ ಪ್ರಶ್ನಿಸಿದ್ದಾರೆ.

ಸಾಲುಸಾಲು ನಕಲಿ ಖಾತೆಗಳನ್ನು ಸೃಷ್ಟಿಸಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುತ್ತಿದ್ದ ತಮ್ಮ ಆಪ್ತನೊಬ್ಬನನ್ನು ಸಚಿವರು ರಕ್ಷಣೆ ಮಾಡಿದ್ದಷ್ಟೇ ಅಲ್ಲ, ಆತನಿಗೆ ಭಟ್ಕಳದ ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ನೌಕರಿ ಕೊಡಿಸಿದ್ದಾರೆ. ಹಲವಾರು ನಾಯಕರ ಶ್ರಮದಿಂದ ಸ್ಥಾಪನೆಯಾಗಿದ್ದ ಬ್ಯಾಂಕ್‌ಗೆ ಇದು ಕೆಟ್ಟ ಹೆಸರು ತರುವುದಿಲ್ಲವೇ. ಸಚಿವರಿಗೆ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಗೌರವ ಇದ್ದರೆ ಮೂರು ಸ್ವಾಮೀಜಿಗಳ ಹಾಗೂ ಸಾರ್ವಜನಿಕರ ಕ್ಷಮೆ ಕೇಳಬೇಕೆಂದು  ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನವೀನ ಭಟ್ಕಳ, ವಿಶ್ವ ತೆಂಗಿನಗುಂಡಿ, ಕೃಷ್ಣ ನಾಯ್ಕ ಬೈಲೂರು, ಅಶೋಕ ನಾಯ್ಕ ಆಸರಕೇರಿ, ವೆಂಕಟೇಶ, ನಾಗರಾಜ ನಾಯ್ಕ ಬಲಸೆ, ಮಂಜು ಹಿನ್ನೂರು, ರವಿ ಹೊನ್ನಾವರ ಹಾಗೂ ಚೇತನ ನಾಯ್ಕ ಮುರ್ಡೇಶ್ವರ ಉಪಸ್ಥಿತರಿದ್ದರು.
ಇದನ್ನು ಓದಿ : ಭಟ್ಕಳದಲ್ಲಿ ರೈಲಿನಿಂದ ಬಿದ್ದು ಕಾರವಾರದ ವ್ಯಕ್ತಿ ಸಾವು.

ಕುಂಭಮೇಳದ  ಮೋನಾಲಿಸಾ ಈಗ ಗೃಹಿಣಿ. ಅನ್ಯ ಕೋಮಿನ ಹುಡುಗನ ವಿವಾಹವಾದ ಹುಡುಗಿ.

ಗುಂಡಿಗೆ ಬಿದ್ದು ಮೇಲಕ್ಕೆ ಬಂದ ಆ್ಯಂಬುಲೆನ್ಸ್. ಹೋದ ಮಹಿಳೆಯ ಜೀವ ಮತ್ತೆ ಬಂದಿದ್ದು ಪವಾಡ.