ಶಿವಮೊಗ್ಗ : ಕಳೆದ 2023ರ ವಿಧಾನಸಭಾ ಚುನಾವಣೆ ವೇಳೆ ಹರಕೆ ಹೊತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವ ಹರಕೆ ಸಲ್ಲಿಸಿದ ಘಟನೆ ಶಿವಮೊಗ್ಗ(SHIVAMOGGA) ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತ ಹರೀಶ್ ಪ್ರಭು ಎಂಬುವವರು ಹರಕೆ ತೀರಿಸಿದವರು. ಹರೀಶ್ ಪ್ರಭು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತ. ಕಳೆದ ಚುನಾವಣೆಯಲ್ಲಿ ರಿಪ್ಪನ್ ಪೇಟೆಯ ವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಕಟ್ಟಿದ್ದರು.
ಶಾಸಕ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಹರೀಶ್ ಹರಕೆ ತೀರಿಸಿದ್ದಾರೆ. 30 ವರ್ಷಗಳಿಂದ ನಾನು ಬಿಜೆಪಿ ಕಾರ್ಯಕರ್ತನಾಗಿದ್ದು, ಈಗಲೂ ಸಹ ನಾನು ಬಿಜೆಪಿ ಕಾರ್ಯಕರ್ತನಿದ್ದೇನೆ. ನನ್ನ ರಕ್ತದ ನರ ನಾಡಿಗಳಲ್ಲಿ ಬಿಜೆಪಿ ಪಕ್ಷದ ಸಿದ್ದಾಂತ ಇದೆ. ಬೇಳೂರು ಗೋಪಾಲಕೃಷ್ಣ ಅವರ ಮಾನವೀಯ ಮೌಲ್ಯ, ಅವರ ಉಪಕಾರದ ಮನೋಭಾವ ಪಕ್ಷದ ಚೌಕಟ್ಟು ಮೀರಿ ನನಗೆ ಅವರ ಪರವಾಗಿ ನಿಲ್ಲುವಂತೆ ಮಾಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಬೇಳೂರಿಗೆ ಟಿಕೇಟ್ ತಪ್ಪಿಸಲು ಸಹ ಕಾಣದ ಕೈ ಕೆಲಸ ಮಾಡಿದವು. ಬೇಳೂರು ಗೋಪಾಲಕೃಷ್ಣ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಒಂದು ವರ್ಷದ ಬಳಿಕ ಹರಕೆ ತೀರಿಸಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಹುದ್ದೆಗೇರಲಿ ಅಂತಾ ಹರಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಕಾಂಗ್ರೆಸ್ ರಣಕಹಳೆ