ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕ್ರಿಸ್‌ಮಸ್‌ ರಜೆಗೆ(Christmas Holiday) ತನ್ನ ಗೆಳತಿಯರೊಂದಿಗೆ ಗೋಕರ್ಣ ಪ್ರವಾಸಕ್ಕೆ(Gokarn Tour) ತೆರಳುತ್ತಿದ್ದ  ಭಟ್ಕಳ ಮೂಲದ(Bhatkal Native) ಯುವತಿ ನಾಪತ್ತೆಯಾಗಿದ್ದಾಳೆ.

ಶಿರಾಲಿ ಮೂಲದ ಸಾಫ್ಟ್‌ವೇ‌ರ್ ಇಂಜಿನಿಯರ್(Software Engineer) ರಶ್ಮಿ ಮಹಾಲೆ ಅವರು ಚಿತ್ರದುರ್ಗದಲ್ಲಿ(Chitradurga) ಸಂಭವಿಸಿದ ಭೀಕರ  ದುರಂತದ ಬಳಿಕ ನಾಪತ್ತೆಯಾಗಿದ್ದಾರೆಂಬ ಮಾಹಿತಿ ‌ಲಭ್ಯವಾಗಿದೆ. ಈಕೆಯೊಂದಿಗೆ  ಇನ್ನು ಆರು ಜನರು ನಾಪತ್ತೆಯಾಗಿದ್ದು‌ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ(Bangalore Private Company) ಕೆಲಸ ಮಾಡುತ್ತಿದ್ದ ರಶ್ಮಿ ಮಹಾಲೆ, ಪ್ರವಾಸಕ್ಕಾಗಿ ಕಂಪನಿಗೆ  ರಜೆ ಹಾಕಿ ತನ್ನ ಸ್ನೇಹಿತರೊಂದಿಗೆ ತೆರಳಿದ್ದರು. ನಾಲ್ಕು‌ ದಿನಗಳ ಕಾಲ‌  ಪ್ರವಾಸಕ್ಕಾಗಿ  ರಶ್ಮಿ  ರಜೆ ಕೇಳಿದಾಗ ಕಂಪನಿ  ಮ್ಯಾನೇಜರ್ ನೀಡಲಿಲ್ಲ ಎನ್ನಲಾಗಿದೆ. ಆದರೆ ರಜೆ ಬೇಕೆ ಬೇಕು ಎಂದಾಗ  ಮ್ಯಾನೇಜರ್  ರಜೆ ಮಂಜೂರು ಮಾಡಿದ್ದರು. ಅದರಂತೆ ಬುಧವಾರ ‌ಡ್ಯೂಟಿ ಮುಗಿಸಿ‌ ರಾತ್ರಿ‌  ತನ್ನಿಬ್ಬರು‌  ಸ್ನೇಹಿತೆಯರೊಂದಿಗೆ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಇದರಲ್ಲಿ ಇಬ್ಬರು ಯುವತಿಯರಾದ ಗಗನ ಮತ್ತು ರಕ್ಷಿತಾ ಬಚಾವ್  ಆಗಿದ್ದಾರೆ.‌ ಆದರೆ  ಯುವತಿ ರಶ್ಮಿ ಸಂಪರ್ಕವೇ ಸಿಗುತ್ತಿಲ್ಲ ಎನ್ನಲಾಗಿದೆ.

ಅವರ ಜೊತೆಗಿದ್ದ ಇಬ್ಬರು ಸ್ನೇಹಿತೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ರಶ್ಮಿ ಅವರ ಮೊಬೈಲ್‌ ಸ್ವಿಚ್ ಆಫ್ ಆಗಿದ್ದು, ಯಾವುದೇ ಸಂಪರ್ಕ ಸಿಗುತ್ತಿಲ್ಲ. ಘಟನೆಯಿಂದ ರಶ್ಮಿ ಕುಟುಂಬದವರು  ಆತಂಕಗೊಂಡಿದ್ದು ಪೊಲೀಸರನ್ನ ಸಂಪರ್ಕಿಸಿದ್ದಾರೆ.  ರಶ್ಮಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ(Police Searching) ನಡೆಸುತ್ತಿದ್ದಾರೆ.

ಇದನ್ನು ಓದಿ : ಭೀಕರ ಅಪಘಾತ. ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ಬೆಂಕಿ. 9 ಪ್ರಯಾಣಿಕರ ಸಜೀವ ದಹನ.

ಕಾರವಾರದಲ್ಲಿ ಹುಚ್ಚೆದ್ದು ಕುಣಿದ ಪ್ರೇಕ್ಷಕರು. ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್.

ಹೊನ್ನಾವರ: ಮಂಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ

ಕಾರವಾರದಲ್ಲಿ ಕೈಗಾ ಉದ್ಯೋಗಿ ಲೈವ್ ಸೂಡ್. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ.*