ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಅದಿರು ಕಳ್ಳತನ ಪ್ರಕರಣದಲ್ಲಿ ಸಿಲುಕಿದ ಕಾರವಾರ ಶಾಸಕ ಸತೀಶ ಸೈಲ್(MLA Satish Sail) ಅವರನ್ನ ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ನಿನ್ನೆ ಬೆಂಗಳೂರಿನ ಇಡಿ ಕಚೇರಿಗೆ ಶಾಸಕ ಸತೀಶ ಸೈಲ್(Satish Sail) ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇಂದು ಸಹ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ಅಧಿಕಾರಿಗಳಿಂದ ವಿಚಾರಣೆ ನಡೆದಿತ್ತು. ರಾತ್ರಿ ಸುಮಾರು 8-30ರ ಸುಮಾರಿಗೆ ಅಧಿಕಾರಿಗಳು ಅವರನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ಕಳೆದ ಅಗಸ್ಟ್ 13 ರಂದು ಇಡಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ಕಾರವಾರ(Karwar), ಗೋವಾ(Goa), ಮುಂಬೈನಲ್ಲಿ ದಾಳಿ ನಡೆಸಿತ್ತು. ಕಾರವಾರದ ಸದಾಶಿವಗಢದಲ್ಲಿರುವ ಸೈಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ(Enforcement Directorate) ಅಧಿಕಾರಿಗಳು ಅಗಸ್ಟ್ 13ರ ಬೆಳಿಗ್ಗೆಯಿಂದ ಅಗಸ್ಟ್ 14ರವರೆಗೆ ಶೋಧ ನಡೆಸಿತ್ತು. ದಾಳಿ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳಲ್ಲಿದ್ದ 14.13 ಕೋಟಿ ರೂಪಾಯಿ, 1.68ಕೋಟಿ ನಗದು, 6.75ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ ಮಹತ್ವದ ದಾಖಲೆಗಳು, ಇಮೇಲ್ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿತ್ತು.
ಸತೀಶ್ ಸೈಲ್ ಅವರು ಶಾಸಕರಾಗುವ ಪೂರ್ವದಲ್ಲಿ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಂಕೋಲಾ ತಾಲೂಕಿನ ಬೆಲೇಕೇರಿ ಅದಿರು(Belekeri Mining) ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿದ್ದರು. ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ(Samtosh Hegde) ಅವರ ತಂಡ ಸೈಲ್ ವಿರುದ್ಧ ಈ ಹಿಂದೆ ದೂರು ದಾಖಲಿಸಿತ್ತು. ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಮತ್ತು ಸುಮಾರು 44 ಕೋಟಿ ದಂಡ ವಿಧಿಸಿತ್ತು. ಜೈಲು ಸೇರಿದ್ದ ಸೈಲ್ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ನಂತರ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.
ಅದಿರು ಅಕ್ರಮ ಸಾಗಾಟದಿಂದ ಬೊಕ್ಕಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇಡಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನಲೆಯಲ್ಲಿ ನಿನ್ನೆಯಿಂದ ಸೈಲ್ ವಿಚಾರಣೆ ಎದುರಿಸುತ್ತಿದ್ದರು. ಇದೀಗ ಅವರನ್ನ ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನು ಓದಿ : ಕಟ್ಟುನಿಟ್ಟಿನ ನಿಯಮದಿಂದ ಕಂಗಾಲಾದ ನಟ. ನ್ಯಾಯಾಧೀಶರ ಬಳಿ ಕೇಳಿದ್ದೇನು?
ದೇವಾಲಯದಲ್ಲಿ ಕಳ್ಳರ ಕರಾಮತ್ತು. ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಕಳ್ಳತನ.
ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ಯಾರ ಕೈಚಳಕ . ಇನ್ನಾದರೂ ಡೋಸ್ ನೀಡುವರೇ ಅಧಿಕಾರಿಗಳು.
