ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ(Mann Ki Bath) 128ನೇ ಸಂಚಿಕೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ(Prime Minister) ಅವರು ದೇಶದ ಜನತೆಗೆ ಮತ್ತು ಮಿಲಿಟರಿ ಇತಿಹಾಸದಲ್ಲಿ(Military History) ಆಸಕ್ತಿ ಹೊಂದಿರುವವರಿಗೆ ಭಾರತೀಯ ನೌಕಾಪಡೆಗೆ(Indian Navy) ಸಂಬಂಧಿಸಿದ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವಂತೆ ಕರೆ ನೀಡಿದ್ದಾರೆ.
ಭಾರತದಲ್ಲಿ ಚಳಿಗಾಲದ ಪ್ರವಾಸೋದ್ಯಮದ (Winter Tourism) ಮಹತ್ವ ಮತ್ತು ಅದಕ್ಕಿರುವ ವಿಫುಲ ಅವಕಾಶಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದ ಮೋದಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.
ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ(Uttarakannada District) ಕಾರವಾರದಲ್ಲಿರುವ ರವೀಂದ್ರನಾಥ ಟ್ಯಾಗೋರ್ ಬೀಚ್ನಲ್ಲಿನ (Ravindranath Tagore Beach) ಐಎನ್ಎಸ್ ಚಾಪೆಲ್ ‘ವಾರ್ಶಿಪ್ ಮ್ಯೂಸಿಯಂ’(INS Chapel Warship Museum) ಬಗ್ಗೆ ಪ್ರಸ್ತಾಪಿಸಿದ ಮೋದಿ, ಅಲ್ಲಿ ಕ್ಷಿಪಣಿಗಳು(Missiles) ಮತ್ತು ಶಸ್ತ್ರಾಸ್ತ್ರಗಳ (Arms) ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು. ಹಾಗೆಯೇ ವಿಶಾಖಪಟ್ಟಣಂನಲ್ಲಿರುವ ಮ್ಯೂಸಿಯಂನಲ್ಲಿ (Vshakapattanam) ಜಲಾಂತರ್ಗಾಮಿ ನೌಕೆಗಳು(Submarine Ships), ಹೆಲಿಕಾಪ್ಟರ್ಗಳು (Helicopters) ಮತ್ತು ವಿಮಾನಗಳನ್ನು(Flights) ಪ್ರದರ್ಶಿಸಲಾಗಿದ್ದು, ಇವುಗಳನ್ನು ವೀಕ್ಷಿಸಲು ಪ್ರವಾಸಿಗರು ಭೇಟಿ ನೀಡಬೇಕೆಂದು ಪ್ರಧಾನಿ ಅವರು ಕರೆ ನೀಡಿದರು.
ಚಳಿಗಾಲ(Winter) ಆರಂಭವಾಗಿದ್ದು, ಪ್ರವಾಸೋದ್ಯಮಕ್ಕೆ ಸಕಾಲವಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಸ್ಕೀಯಿಂಗ್, ಸ್ನೋ ಬೋರ್ಡಿಂಗ್ ಮತ್ತು ಸ್ನೋ ಟ್ರೆಕ್ಕಿಂಗ್ನಂತಹ ಚಟುವಟಿಕೆಗಳ ಮೂಲಕ ಚಳಿಗಾಲದ ಪ್ರವಾಸೋದ್ಯಮವನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬಾಗಿ ಮಾಡಿಕೊಂಡಿವೆ. ಭಾರತದಲ್ಲೂ ಪರ್ವತಗಳು(Mountains), ಸಂಸ್ಕೃತಿ(Culture) ಮತ್ತು ಸಾಹಸ ಕ್ರೀಡೆಗಳಿಗೆ(Adventure Sports) ವಿಫುಲ ಅವಕಾಶಗಳಿದ್ದು, ನಮ್ಮಲ್ಲೂ ಅಂತಹ ಸಾಮರ್ಥ್ಯವಿದೆ ಎಂದು ಮೋದಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಓದಿ : ಕನ್ನಡ ಚಿತ್ರರಂಗದ ಹಾಸ್ಯ ನಟ ಉಮೇಶ ಅಗಲಿಕೆ.
ಕಾರವಾರದ ಸರ್ಕಾರಿ ಕಾಲೇಜು ಆವರಣದೊಳಗೆ ಆಗಸದೆತ್ತರಕ್ಕೆ ಬೆಂಕಿ. ಆತಂಕದ ವಾತಾವರಣ.
