ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಖಾಸಗಿ ಬಸ್(Private Bus) ಮೂಲಕ ತಮಿಳುನಾಡಿನ  ಹೊಸೂರಿಗೆ (Tamilunadu Hosuru) ಯಾವುದೇ ದಾಖಲೆ ಇಲ್ಲದೇ ಸುಮಾರು ಕೋಟಿ  ರೂಪಾಯಿ(Crores Rupees) ಹಣ ಸಾಗಿಸುತ್ತಿರುವುದನ್ನ ಕಾರವಾರದ ಚಿತ್ತಾಕುಲ ಪೊಲೀಸರು(Karwar Chittakul Police) ಪತ್ತೆ ಮಾಡಿದ್ದಾರೆ

ಸೋಮವಾರ ರಾತ್ರಿ   ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೊಸ್ಟ್(Majali Checkpost) ಬಳಿ ಈ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಮಿರ್ಜಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ರಾಜಸ್ಥಾನ ಮೂಲದ(Rajasthan Native) ಕಲ್ಲೇಶ್‌ಕುಮಾರ ಮುಂಗಿಲಾಲಜಿ (29)ಹಾಗೂ ಬಮ್ರಾರಾಮ್ ಸಾವ್ಲಾ (30)ಎಂಬುವವರು  ಸೇರಿ ಜಿಂಗೋ ಖಾಸಗಿ ಬಸ್‌ನಲ್ಲಿ ಹಣ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಪೊಲೀಸರು ‌ಎಸ್ಪಿ ದೀಪನ್, ಡಿವೈಎಸ್ಪಿ ಗಿರೀಶ್  ಅವರ ಮಾರ್ಗದರ್ಶನದಲ್ಲಿ ಬಸ್ ನಿಲ್ಲಿಸಿ ತಪಾಸಣೆ ನಡೆಸಿದ್ದರು. ಈ ವೇಳೆ ಒಂದು ಕೋಟಿ ಹಣವನ್ನ ಸಾಗಿಸುತ್ತಿರುವುದು ಗೊತ್ತಾಗಿದೆ.

ಬಳಿಕ ಇಬ್ಬರನ್ನು ಬಂಧಿಸಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ  ಯಾರಿಗೆ ಈ ಹಣ ಸೇರಿದ್ದು ಎನ್ನುವ ಮಾಹಿತಿ ಬಂಧಿತರಿಂದ ಲಭ್ಯವಾಗಿಲ್ಲ.  ಅಲ್ಲದೇ ದಾಖಲೆಗಳು ಇರಲಿಲ್ಲ ಎನ್ನಲಾಗಿದೆ.  ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ(Chittakul Police Station) ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಗಳಾದ ಗಣೇಶ, ಜೈವಂತ ತಾಮ್ಸೆ, ಗೌತಮರಾಜ್,  ಜೀಪ್ ಚಾಲಕ ಪ್ರದೀಪ್ ಇದ್ದರು.

ಇದನ್ನು ಓದಿ : ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ. ನಿಯಮ ಉಲ್ಲಂಘಿಸಿದವರ ಲೈಸೆನ್ಸ್ ರದ್ದು

ಹೆದ್ದಾರಿಯಲ್ಲಿ ಪಲ್ಟಿಯಾದ ಸೇಬು ಹಣ್ಣಿನ ಲಾರಿ. ರಸ್ತೆ ಸಂಚಾರಕ್ಕೆ ಕೆಲ ಕಾಲ ತಡೆ.

ಬ್ರಿಟಿಷ್‌ ಕಾಲದ ಟೋಪಿಗೆ ಗುಡ್ ಬೈ. ಇನ್ಮುಂದೆ ಪೊಲೀಸರಿಗೆ ಸ್ಲೋಚ್ ಬದಲಾಗಿ ಪೀಕ್ ಕ್ಯಾಪ್.