ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೋರ್ವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ(Commit Sucide) ಘಟನೆ ಮುರ್ಡೇಶ್ವರದ ಪ್ರಾರ್ಥನಾ ಹೊಟೇಲ್(Murdeshwar Prarthana Hotel) ಹಿಂಭಾಗದಲ್ಲಿ ನಡೆದಿದೆ.
ಪ್ರಸಾದ್ ಚಂದ್ರಕಾಂತ ಕೋಳಿ (28)ಮೃತ ದುರ್ದೈವಿ. ಬೆಳಗಾವಿ(Belagavi) ಜಿಲ್ಲೆಯ ಗೋಕಾಕ ತಾಲೂಕಿನ ಸೋಮವಾರಪೇಟೆ(Gokak Taluku Somavarapete) ನಿವಾಸಿ ಎಂದು ತಿಳಿದುಬಂದಿದೆ.ಜನವರಿ ನಾಲ್ಕರಂದು ರಾತ್ರಿ 11 ಗಂಟೆಯ ನಡುವೆ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ ಗುಮ್ಮನಹಕ್ಲು ರಾಘು ಮಂಜುನಾಥ ನಾಯ್ಕ ಎಂಬುವವರು ಖುಲ್ಲಾ ಜಾಗದಲ್ಲಿ ಪೋನಿನಲ್ಲಿ ಮಾತನಾಡುತ್ತಾ ವಾಕ್ ಮಾಡುತ್ತಿದ್ದಾಗ ಈತನ ಮೃತ ದೇಹ ಪತ್ತೆಯಾಗಿದೆ. ತಕ್ಷಣ ಮುರ್ಡೇಶ್ವರ ಪೊಲೀಸರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಇದನ್ನು ಓದಿ : ಸಿಲೆಂಡರ್ ಸ್ಪೋಟ. ಆರು ಜನರಿಗೆ ಗಾಯ. ಇಬ್ಬರು ಗಂಭೀರ.
