ಕಾರವಾರ (KARWAR) : ಗೋವಾದ ಮಾರ್ಗೋವಾ ಠಾಣೆ(Margao Station) ಪೊಲೀಸರು ಉದ್ಯೋಗ ವಂಚನೆ ಪ್ರಕರಣದಲ್ಲಿ (Fraud case) ಕಾರವಾರದ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು  ಬಂಧಿಸಿದ್ದಾರೆ.

ಕಾರವಾರ(Karwar) ತಾಲೂಕಿನ ಸದಾಶಿವಗಡ (Sadashivagada) ಆಚಾರಿವಾಡಾದ ಸೋನಿಯಾ ಅಲಿಯಾಸ್ ರೋಷನ್ ಸೋಮನಾಥ ಆಚಾರಿ ಮತ್ತು ಗೋವಾದ ಸಾವೋ ಜೋಸ್ ಡಿ ಏರಿಯಾಲ್‌ನ ವಿಜಯಾ ಗಾವಡೆ ಬಂಧಿತರಾಗಿದ್ದಾರೆ. ನವೇಲಿಮ್ ನಾಗಮೋಡೆಮ್‌ನ ಸುನೀಲ್ ಬೋರ್ಕರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್‌ 420 ಆರ್/ಡಬ್ಲ್ಯೂ34ರ ಅಡಿಯಲ್ಲಿ ಪ್ರಕರಣ  ದಾಖಲಿಸಲಾಗಿದೆ.

ದೂರಿನ ಪ್ರಕಾರ ಆರೋಪಿತರಾದ ವಿಜಯಾ ಮತ್ತು ಸೋನಿಯಾ ಅವರು  2020ರ ಜನವರಿ 20 ಮತ್ತು ಜೂನ್ 30ರ ಅಂತರದಲ್ಲಿ ಕಾರವಾರದಲ್ಲಿ ಕೆಲಸ (job) ಕೊಡಿಸುತ್ತೇನೆಂದು ನಂಬಿಸಿದ್ದರು. ಹೀಗಾಗಿ 16,12,500 ರೂ ಪಡೆದು ವಂಚಿಸಿದ್ದರು(Cheating). ಹೀಗಾಗಿ ದೂರಿನ ಆಧಾರದ ಮೇಲೆ ಬಂಧಿಸಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನು ಓದಿ : ಜಿಂಕೆ ಬೇಟೆಯಾಡಿದವರ ಬಂಧನ

ರೈಲಿಗೆ ಅಡ್ಡ ಬಂದು ವ್ಯಕ್ತಿ ಸಾವು

ಗೋಕರ್ಣದಲ್ಲಿ ಸಿಡಿಲು ಬಡಿದು ಸಾವು