*ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ಸಾಮಾನ್ಯವಾಗಿ ನಾಗರಪಂಚಮಿಯ (Nagapanchami) ದಿನ ಭಕ್ತರು  ದೇವಾಲಯಗಳಿಗೆ, ನಾಗರ ಸ್ಥಳಕ್ಕೆ  ತೆರಳಿ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದೇ ರೀತಿ ನಾಡಿನಲ್ಲಡೆ ಸಂಬೃಮದಿಂದ ಹಬ್ಬ ಆಚರಿಸಲಾಗಿದೆ.

ಕಾರವಾರದಲ್ಲಿ  ಜನಶಕ್ತಿ ವೇದಿಕೆಯವರು ಪ್ರತಿ ವರ್ಷದಂತೆ ಈ ವರ್ಷವೂ  ವಿನೂತನವಾಗಿ ಹಬ್ಬ ಆಚರಿಸಿದರು. ಇಲ್ಲಿನ ಆಶಾನಿಕೇತನ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯ  ವಿಶೇಷ ಚೇತನ ಮಕ್ಕಳಿಗೆ ಹಾಲು ಮತ್ತು ಸಿಹಿ ತಿಂಡಿಗಳನ್ನ ವಿತರಿಸುವ ಮೂಲಕ ನಾಗರ ಪಂಚಮಿಯನ್ನ ವಿಶೇಷವಾಗಿ ಆಚರಿಸಿದರು. 

ಹಬ್ಬದಂದು  ಹುತ್ತಗಳಿಗೆ, ನಾಗರಕಲ್ಲಿಗೆ ಹಾಲನ್ನ ಅರ್ಪಿಸಿ ವ್ಯರ್ಥವಾಗಿ ಪೋಲು ಮಾಡುವ ಬದಲು  ನಿರ್ಗತಿಕರಿಗೆ, ಬಡ ಮಕ್ಕಳಿಗೆ ಅದನ್ನ ನೀಡಿದಲ್ಲಿ ಸಾರ್ಥಕವಾಗಲಿದೆ. ಜೊತೆಗೆ  ಪುಣ್ಯ ಸಿಗುತ್ತದೆಂಬುದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಮಕ್ಕಳಿಗೆ ನಿಜವಾದ ನಾಗರ ಹಾವಿನ ದರ್ಶನ ಮಾಡಿಸಿ ಅವುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಲ್ಲದೇ ಮಕ್ಕಳ ಕೈಯಲ್ಲಿ ಹಾವು ಕೊಟ್ಟು ಭಯ ಹೋಗಲಾಡಿಸಿದರು. ಜನಶಕ್ತಿ  ವೇದಿಕೆಯ ಮಾಧವ ನಾಯಕ, ರಾಮಾ ನಾಯ್ಕ, ಕಾರವಾರ ಡಿವೈಎಸ್ಪಿ ಗಿರೀಶ್, ಬಾಬು ಶೇಕ್, ಖೈರುನ್ನಿಸಾ, ಫಕಿರಪ್ಪ ಭಂಡಾರಿ ಸೇರಿದಂತೆ ಇತರರು ಹಾಜರಿದ್ದರು. ಉರಗ ಪ್ರೇಮಿ ಮಹೇಶ ನಾಯ್ಕ ಅವರ್ಸಾ ಮಾಹಿತಿ ನೀಡಿದರು.

ಇದನ್ನು ಓದಿ : ಧರ್ಮಸ್ಥಳ ಪ್ರಕರಣ. ಭದ್ರತೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ ಎಸ್‌ಐಟಿ.

ರೈಲು ಡಿಕ್ಕಿಯಾಗಿ ವ್ಯಕ್ತಿ ಗಂಭೀರ ಗಾಯ.