ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಚುನಾವಣೆಗೆ(Fish Federation Election) ಭಟ್ಕಳದ ಹಿರಿಯ ಮೀನುಗಾರ ಮುಖಂಡ ವಿಠ್ಠಲ ಎಸ್ ದೈಮನೆ ಸೊಸೈಟಿ ವತಿಯಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ವಿಠ್ಠಲ್ ದೈಮನೆ ಅವರು ಕಳೆದ 36 ವರ್ಷಗಳಿಂದ ಸಾಮಾಜಿಕವಾಗಿ ಹಲವು ಕಾರ್ಯಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಫೆಡರೇಶನ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಭಟ್ಕಳ(Bhatkal)ತಾಲೂಕಿನ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘದಲ್ಲಿ(Alvekodi Fisheries Co operative Society) ಕಳೆದ ಮೂರು ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅವರು ಮೀನುಗಾರರ ಕಲ್ಯಾಣಕ್ಕಾಗಿ (Fishermen Welfare) ಶ್ರಮಿಸಿದವರು. ತಮ್ಮ ಸೊಸೈಟಿಯ ವತಿಯಿಂದ ಮಂಜುಗಡ್ಡೆ ಸ್ಥಾವರ(Ice Plant) ನಿರ್ಮಾಣ, ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವಲ್ಲಿ ಕಾರಣಿಕರ್ತರಾಗಿದ್ದಾರೆ.

ಸೊಸೈಟಿಗೆ 50 ಲಕ್ಷರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾದವರು. ಆಸ್ತಿ ಅಡಮಾನ ಸಾಲದ ಮೂಲಕ ಮೀನುಗಾರಿಕೆಗೆ ಉತ್ತೇಜಿಸಲು ಸಹಕರಿಸಿದವರು. ಈಗಾಗಲೇ ತೆಂಗಿನಗುಂಡಿಯಲ್ಲಿ ಹಳೆಯ ಡಿಸೇಲ್ ಬಂಕ್(Diesel Bunk) ಇದ್ದು, ಇದೀಗ ಅಳ್ವೇಕೋಡಿ ಬಂದರಿನಲ್ಲಿ ಹೊಸ ಡಿಸೇಲ್ ಬಂಕ್ ನಿರ್ಮಾಣದ ಯೋಜನೆ ರೂಪಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಸೊಸೈಟಿಯಾಗಿ ಅಳ್ವೆಕೋಡಿ ಸಂಘ(Alvekodi Sangha) ಗುರುತಿಸಿಕೊಂಡಿದ್ದು ಸತತ ಎರಡು ಬಾರೀ ಸರ್ಕಾರದ ವತಿಯಿಂದ ಉತ್ತಮ ಸೊಸೈಟಿ ಎಂದು ಪ್ರಶಸ್ತಿ ಪಡೆದುಕೊಂಡಿದೆ. ಈ ಹಿಂದೆ ಬಿ ಎಸ್ ಯಡಿಯೂರಪ್ಪ(B S Yadiyurappa) ಅವರ ಸರ್ಕಾರದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ(Karavali Development Authority) ಸದಸ್ಯರಾಗಿ ವಿಠ್ಠಲ್ ದೈಮನೆ ಕೆಲಸ ಮಾಡಿದ್ದರು. ಶಿರಾಲಿ ಗ್ರಾಮ ಪಂಚಾಯತ್ ಗೆ(Shirali Grama Panchayat) ಒಮ್ಮೆ ಅಧ್ಯಕ್ಷರಾಗಿ , ಮತ್ತೊಮ್ಮೆ ಸದಸ್ಯರಾಗಿ ಕೆಲಸ ಮಾಡಿದ್ದರಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದಾರೆ.
ಇದೇ ಮಾರ್ಚ್ 29ರಂದು ನಡೆಯುವ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆ ಬಯಸಿ ತಮ್ಮ ನಾಮಪತ್ರ(Nomination) ಸಲ್ಲಿಸಿದ್ದಾರೆ.
ಇದನ್ನು ಓದಿ : ಮುರ್ಡೇಶ್ವರ ಸಮೀಪ ಬೈಕ್ ಗೆ ಟಿಪ್ಪರ್ ಢಿಕ್ಕಿ. ಸವಾರ ದುರ್ಮರಣ.
ಕಾರವಾರ ಮೆಡಿಕಲ್ ವಿದ್ಯಾರ್ಥಿಗಳ ಸರಣಿ ಸಾವು. ಬೈಕ್ ಅಪಘಾತದಲ್ಲಿ ಓರ್ವ ಸಾವು, ಇನ್ನೋರ್ವ ಗಂಭೀರ.
