ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡಜಿಲ್ಲೆಯ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ನೌಕರರೊಬ್ಬರು(NPCIL employee) ಆತ್ಮಹತ್ಯೆಗೆ ಶರಣಾದ ಘಟನೆ ಮಲ್ಲಾಪುರದಲ್ಲಿ(Mallapur) ನಡೆದಿದೆ.

ತಮ್ಮ ಪತ್ನಿ ಮತ್ತು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ಅವರ ಎದುರಿಗೆ ಲೈವ್ ಸೂಸೈಡ್ ಮಾಡಿಕೊಂಡಿದ್ದಾರೆ. ಘಟನೆ ಕುಟುಂಬದವರನ್ನ ಬೆಚ್ಚಿ ಬೀಳಿಸಿದೆ.
ಮಲ್ಲಾಪುರ ಮಲ್ಟಿ(Mallapur Multi) ಪ್ರದೇಶದಲ್ಲಿ ವಾಸವಿದ್ದ ಸಚ್ಚಿದಾನಂದ ಭಿಕಾಜಿ ವಾಗ್ಗೇಕರ (44)ಮೃತ ದುರ್ದೈವಿ. ಎನ್ ಪಿ ಸಿ ಐಎಲ್ ಕೈಗಾದಲ್ಲಿ(NPCIL Employee) ಉದ್ಯೋಗಿಯಾಗಿದ್ದ ಸಚ್ಚಿದಾನಂದ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ವಿದ್ಯಾಭ್ಯಾಸದ ಸಲುವಾಗಿ ಪತ್ನಿ ಮಕ್ಕಳೊಂದಿಗೆ ಮಂಗಳೂರಿನಲ್ಲಿ(Mangalore) ವಾಸವಿದ್ದರು. ಸಚ್ಚಿದಾನಂದ ಅವರು ಮಲ್ಲಾಪುರದ ವಸತಿಗೃಹದಲ್ಲಿ ಒಬ್ಬರೇ ಇರುತ್ತಿದ್ದರು. ಸೋಮವಾರ ರಾತ್ರಿ ಸುಮಾರು 11:30 ಗಂಟೆಗೆ ಸಚ್ಚಿದಾನಂದ ಅವರು ಮಂಗಳೂರಿನಲ್ಲಿರುವ ಪತ್ನಿ ಮತ್ತು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ನಾನು ಈಗ ಏನು ಮಾಡುತ್ತೇನೆ ನೋಡು ಎಂದು ಹೇಳಿ ಮೊಬೈಲ್ ಕ್ಯಾಮರಾವನ್ನು(Mobile Camera) ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ಆತಂಕದಿಂದ ಬೇಡವೆಂದು ಅಂಗಲಾಚಿದರೂ ಕೇಳದೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಅನಾರೋಗ್ಯ ಅಥವಾ ಯಾವುದೋ ಕಾರಣವನ್ನ ಮನಸ್ಸಿಗೆ ಹಚ್ಚಿಕೊಂಡು ಸಚ್ಚಿದಾನಂದ ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ(Mallapur Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ಮಹಿಳೆಯ ಸಾವಾದ ಕೊಲೆ. ಪೊಲೀಸರಿಂದ ತನಿಖೆ.
