ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಯಲ್ಲಾಪುರ(Yallapur) : ಬೈಕ್ ಗೆ ಅಪಘಾತಪಡಿಸಿ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕನನ್ನ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು(Yallapur Police) ಸಣ್ಣ ಸುಳಿವಿನೊಂದಿಗೆ ಬಂಧಿಸಿದ್ದಾರೆ.
ಕಿರವತ್ತಿಯಲ್ಲಿ(Kiravatti) ಅಳವಡಿಸಿದ್ದ ಸಿಸಿಕ್ಯಾಮೆರಾ ಪ್ರಕರಣವೊಂದನ್ನು ಬೇಧಿಸಲು ಸಹಕಾರಿಯಾಗಿದೆ. ಜೂನ್ 8ರಂದು ಯಲ್ಲಾಪುರದ(Yallapur) ಚಿಕ್ಕಮಾವಳ್ಳಿ ಬಳಿಯ ಇಂಡಿಯಾ ಗೇಟ್ ಹೊಟೇಲ್ ಎದುರು ಅಪರಿಚಿತ ವಾಹನ ಬೈಕಿಗೆ ಢಿಕ್ಕಿ ಹೊಡೆದಿತ್ತು. ಅಪಘಾತ ನಡೆದ ನಂತರ ಚಾಲಕ ತನ್ನ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಅಪಘಾತದಲ್ಲಿ ಗಾಯಗೊಂಡವರನ್ನು ಆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದೇ ಬೈಕ್ ಸವಾರರಾದ ಕಲಘಟಗಿಯ (Kalaghatagi) ರಾಮು ಗುಜಲೂರು ಹಾಗೂ ವಿಷ್ಣು ಗುಜಲೂರು ಇಬ್ಬರು ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ವಾಹನಗಳನ್ನ ಹುಡುಕಲು ಪೊಲೀಸರು ಕಿರವತ್ತಿಯಲ್ಲಿ ಹೊಸದಾಗಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದರು. ವಾಹನ ಹುಬ್ಬಳ್ಳಿ(Hubli) ಕಡೆ ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಪಘಾತಕ್ಕೆ ಕಾರಣವಾದ ವಾಹನ ಲಾರಿ ಎಂದು ಪತ್ತೆ ಮಾಡಿದ್ದರು. ಹಳದಿ ಬಣ್ಣದ ಪೇಂಟ್ ಬಿದ್ದಿರುವುದನ್ನು ಗಮನಿಸಿ ಲಾರಿಯ ಬಣ್ಣವನ್ನು ಖಚಿತಪಡಿಸಿಕೊಂಡಿದ್ದರು. ಈ ನಡುವೆ ಪ್ರತ್ಯಕ್ಷದರ್ಶಿಯೊಬ್ಬರು ಟ್ಯಾಂಕರ್ ಗುದ್ದಿ ಆ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ (So M Narayan) ಅವರು ಸ್ಥಳ ಭೇಟಿ ನಡೆಸಿ ಕುರುಹುಗಳನ್ನು ಸಂಗ್ರಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಜೊತೆಗೆ ಪೊಲೀಸ್ ಉಪ ಅಧೀಕ್ಷಕಿ ಗೀತಾ ಪಾಟೀಲ್ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪೊಲೀಸರು ತಮ್ಮಗೆ ಸಿಕ್ಕ ಸುಳಿವು ಹಾಗೂ ಸಿಸಿ ಕ್ಯಾಮರಾದಲ್ಲಿನ ದಾಖಲೆಗಳು ಹೊಂದಾಣಿಕೆಯಾಗುತ್ತಿದ್ದವು. ಹೀಗಾಗಿ ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್ಐ ಯಲ್ಲಾಲಿಂಗ ಕನ್ನೂರು, ಸಿದ್ದಪ್ಪ ಗುಡಿ ಆ ಟ್ಯಾಂಕರ್ ಬೆನ್ನತ್ತಿ ಹೊರಟಿದ್ದರು
ಪೊಲೀಸ್ ಸಿಬ್ಬಂದಿ ಮಹಮದ್ ಶಫೀ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಶೋಭಾ ನಾಯ್ಕ ಹಾಗೂ ಶಿಲ್ಪಾ ಗೌಡ ಸೇರಿ ಹುಬ್ಬಳ್ಳಿಯಲ್ಲಿ ಅಡಗಿದ್ದ ಶೀತಲಪ್ರಸಾದ ಬಿಂದ್ ಎಂಬಾತನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಲಾರಿ ಚಾಲಕನಾಗಿದ್ದ ಶೀತಲಪ್ರಸಾದ್ ಆ ದಿನ ಅಪಘಾತ ಮಾಡಿದನ್ನು ಒಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನು ಓದಿ : ಭಟ್ಕಳ ಕಲ್ಬಂಡಿ ಇಸ್ಪೀಟ್ ಕ್ಲಬ್ ಮೇಲೆ ಪೊಲೀಸರ ದಾಳಿ. ಹಲವರ ಮೇಲೆ ಪ್ರಕರಣ.