ಕುಮಟಾ(KUMTA): ಆನ್ಲೈನ್ ವಂಚನೆಗೆ(ONLINE CHEATING) ಒಳಗಾದ ವ್ಯಕ್ತಿಯೊರ್ವನಿಗೆ ಪೊಲೀಸರು ಹಣವನ್ನು ಮರಳಿ ಖಾತೆಗೆ ಜಮಾ ಮಾಡಿಸಲು ಯಶಸ್ವಿಯಾದ ಘಟನೆ ಕುಮಟಾದಲ್ಲಿ ನಡೆದಿದೆ.
ಅಂತ್ರವಳ್ಳಿ ಕುಡ್ಲೆಯ ಹುಲಿಯಾ ಗೌಡ ಸೈಬರ್ ವಂಚನೆಗೊಳಗಾದ ವ್ಯಕ್ತಿ. ಹುಲಿಯಾ ಗೌಡ ಅವರ ಆಧಾರ್ ಬಯೋಮೆಟ್ರಿಕ್’ನ್ನು (ADHAR BIOMETRIC) ದುರುಪಯೋಗಪಡಿಸಿಕೊಂಡಿದ್ದ ವಂಚಕರು ಉಪಾಯವಾಗಿ ಅವರ ಖಾತೆಯಲ್ಲಿದ್ದ 57 ಸಾವಿರ ರೂ ಹಣವನ್ನು ಎಗರಿಸಿದ್ದರು. ಹಣ ಕಣ್ಮರೆಯಾಗಿರುವುದು ಗೊತ್ತಾದ ಕೂಡಲೇ ಹುಲಿಯಾ ಗೌಡ ಅವರು 1930 ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಬಳಿಕ ದೂರು ಕುಮಟಾ ಪೊಲೀಸರಿಗೆ (KUMTA POLICE) ವರ್ಗವಾಗಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ತಕ್ಷಣವೇ ವಂಚಕರ ಬ್ಯಾಂಕ್ ಖಾತೆಯನ್ನು ಫ್ರಿಜ್ (BANK ACCOUNT PREEZ) ಮಾಡಿಸಿದರು. ಆಗ ವಂಚಕರು ಖಾತೆಗೆ ಜಮಾ ಆದ ಹಣವನ್ನು ಪಡೆಯಲು ಸಾಧ್ಯವಾಗದ ರೀತಿಯಲ್ಲಿ ತಡೆ ಒಡ್ಡಿದರು.
ಎರಡು ದಿನದೊಳಗೆ ಹುಲಿಯಾ ಗೌಡ ಅವರು ಕಳೆದುಕೊಂಡ ಹಣ ಅವರ ಬ್ಯಾಂಕ್ ಖಾತೆಗೆ ಪುನಃ ಜಮಾ ಆಗಿದೆ. ಪೊಲೀಸರ ಕಾರ್ಯ ವೈಖರಿಗೆ ಶ್ಲಾಘಿಸಿದರು. ಪೊಲೀಸ್ ಅಧೀಕ್ಷಕರಾದ ಎಂ ನಾರಾಯಣ ಅವರು ಕುಮಟಾಗೆ ಭೇಟಿ ನೀಡಿರುವ ಸುದ್ದಿ ತಿಳಿದ ಹುಲಿಯಾ ಗೌಡ ಅವರ ಪುತ್ರ ಕಿರಣ್ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಬಡ ಕುಟುಂಬಕ್ಕೆ ನೆರವಾದ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಎಂ ನಾರಾಯಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ನಾರ್ತ್ ಕರ್ನಾಟಕ ಅಚೀವರ್ಸ್ ಅವಾರ್ಡ್ ಪಡೆದ ಚೈತ್ರಾ ಕೊಟಾರಕರ.
ರತನ್ ಟಾಟಾ ನಿಧನಕ್ಕೆ ಪ್ರೇಯಸಿ ಬಾವುಕ ವಿದಾಯ