ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಗಳೂರು (Mangalore) :  ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ(KMC Hospital) ವೈದ್ಯರ ತಂಡ  ಯಶಸ್ವಿ ಚಿಕಿತ್ಸೆ (Success Operation)ನೀಡಿ ಗುಣಪಡಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ  ಅಸ್ತಮಾ ಎಂದು ತಿಳಿದ  ರಮೇಶ್ ಎಂಬುವವರು ಕೊನೆಗೂ ಕೆಎಂಸಿ ಆಸ್ಪತ್ರೆಯಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ. ರಮೇಶ ಅವರಿಗೆ ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಇರಲಿಲ್ಲ. ಆದರೂ  ಆರು ತಿಂಗಳಿನಿಂದ ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ ಪಡೆದಿದ್ದರು.  ಬೊಂಕೊಡೈಲೇಟರ್ ಥೆರಪಿ ಪಡೆದರೂ  ಯಾವುದೇ ಸುಧಾರಣೆ ಆಗಿರಲಿಲ್ಲ.

  ಕೆಎಂಸಿ ಆಸ್ಪತ್ರೆಯ(KMC Hospital) ಕನ್ಸಲ್ಟಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ, ಹಿರಿಯ ಕನ್ಸಲ್ವೆಂಟ್ ಅರವಳಿಕೆತಜ್ಞ ಡಾ ಸುನೀಲ್ ಬಿ ವಿ, ಕನ್ಸಲ್ವೆಂಟ್ ಪಲ್ಮನೊಲಾಜಿಸ್ಟ್ ಡಾ. ಉದಯ, ಅರವಳಿಕೆ ತಜ್ಞ ಡಾ. ಪ್ರೇಡಾ, ಬೊಂಕೊಸ್ಕಾಪಿ ಅಸಿಸ್ಟೆಂಟ್ ಮಗ್ಗೆಲಿನಾ ಪೈಸ್, ಮಲ್ಲೇಶ್ ಪಿ, ಸುಮಿತ್ರಾ, ರೀಮಾ ಡಿಸೋಜಾ, ಸಂಯೋಜಕಿ ಸೈರಾ ಡಿಸೋಜಾ ಅವರ ತಂಡ ರೋಗಿಗೆ ಅವರ ಸಾಮಾನ್ಯ ಜೀವನವನ್ನು ಪುನರ್‌ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ರೋಗಿಯ ವಿಚಾರಣೆ ನಡೆಸಿದಾಗ ಕೆಲ ತಿಂಗಳ ಹಿಂದೆ ಕಡಲೆಕಾಯಿ ಗಂಟಲಿಗೆ ಸಿಲುಕಿದ್ದ ಬಗ್ಗೆ ತಿಳಿಸಿದ್ದಾರೆ.  ನೀರು ಸೇವಿಸಿದ ಬಳಿಕ ಸಮಸ್ಯೆ ಕಡಿಮೆಯಾಯಿತು ಎಂದಿದ್ದರು. ಅಂದಿನಿಂದ ಉಬ್ಬಸ ಸಮಸ್ಯೆ ಕಾಣಿಸಿಕೊಂಡಿದೆ. ಎಕ್ಸರೆಯಲ್ಲಿ   ಬಲ ಡಯಾಫ್ರಾಮ್‌ನಲ್ಲಿ ಉಬ್ಬು ಪತ್ತೆಯಾಗಿದೆ. ಇದರಿಂದ ಗಾಳಿ ಸುಗಮ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿತ್ತು.

ಪ್ಲೆಕ್ಸಿಬಲ್ ಬೊಂಕೊಸ್ಕಾಪಿ ತಪಾಸಣೆಯಲ್ಲಿ ಶ್ವಾಸನಾಳದಲ್ಲಿ ಕಡಲೆಕಾಯಿಯ ತುಣುಕು ಸಿಲುಕಿರುವುದು ಪತ್ತೆಯಾಗಿದೆ. ಇಂಥದ್ದೊಂದು ಪ್ರಕರಣ ಅಪರೂಪವಾಗಿದ್ದು ಆರೋಗ್ಯವಂತ ವ್ಯಕ್ತಿಯಲ್ಲಿ ಉಬ್ಬಸ, ಉಸಿರಾಟದ ಸಮಸ್ಯೆ ಕಂಡುಬಂದಾಗ ಹೊರಗಿನ ವಸ್ತು ದೇಹದಲ್ಲಿ ಸಿಲುಕಿರುವ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ” ಎಂದು ಕೆಎಂಸಿ ಆಸ್ಪತ್ರೆಯ ಕನ್ಸಲ್ವೆಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಪಾಸಣೆಯಲ್ಲಿ ತಜ್ಞರ ತಂಡ ಶ್ವಾಸನಾಳದ ಬಲ ಮಧ್ಯಭಾಗದಲ್ಲಿ ಕಡಲೆಬೀಜದ ತುಣುಕು ಪತ್ತೆಹಚ್ಚಿದ್ದು ಫೋರ್ಸೆಪ್ಸ್ ಮೂಲಕ ಆಹಾರದ ತುಣುಕನ್ನು ಗಂಟಲಿನವರೆಗೆ ತರಲಾಯಿತು. ಬಳಿಕ ಜಾಗೃತ ಸೆಡೆಶನ್‌ನ ಜೊತೆಗೆ ರೋಗಿಗೆ ಕೆಮ್ಮುವಂತೆ ಮಾಡಿ ತುಣುಕನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಚಿಕಿತ್ಸೆ ಬಳಿಕ ರಮೇಶ್  ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಮನೆಗೆ ಮರಳಿದ್ದಾರೆ. ಒಂದು ಕಡಲೆ ಬೀಜದಿಂದ ಅನುಭವಿಸಿದ ಯಾತನೆ ಈಗ ದೂರವಾಗಿದೆ.

ಇದನ್ನು ಓದಿ : ಲಿವ್ ಇನ್ ಸಂಗಾತಿ *ತ್ಯೆ ಮಾಡಿದ ಯುವಕ ಮಾಡಿದ್ದೇನು ಗೊತ್ತಾ.

ಕೇಣಿಯಲ್ಲಿ ಬಂದರು ಮಾಡಲು ಹುನ್ನಾರು. ಜೆಎಸ್ ಡಬ್ಲೂ ಕಂಪನಿಯಿಂದ ಶಾಲಾ ಮಕ್ಕಳಿಗೆ ಆಮಿಷ. ಸ್ಥಳೀಯರ ತಕರಾರು.