ಕುಮಟಾ(Kumta) : ಅಕ್ಟೋಬರ್ 31 ರ ರಾತ್ರಿ ಪಂಚಗಂಗಾ ರೈಲು(Panchaganga Train) ಪ್ರಯಾಣ ಸುಗಮವಾಗಿ ಸಾಗುತ್ತಿದ್ದ ವೇಳೆ ಇನ್ನೊಂದು ರೈಲಿಗೆ ಎಂಜಿನ್ (Rail Engine) ಜೋಡಿಸಿ ಸಂಚಾರ ಅಸ್ತವ್ಯಸ್ತ ಮಾಡಿ ಗೊಂದಲ ಉಂಟು ಮಾಡಿದ ಘಟನೆ ವರದಿಯಾಗಿದೆ.
ಕಾರವಾರದಿಂದ(Karwar) ಹೊರಟಿದ್ದ ರೈಲನ್ನು ಅಂಕೋಲಾ(Ankola) ಬಳಿ ನಿಲ್ಲಿಸಿ , ಪಂಚಗಂಗಾ ರೈಲಿನ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಿಸೇಲ್ ಇಂಜಿನ್ ಕಳಚಿ ಅದನ್ನು ಕೆಟ್ಟು ನಿಂತಿದ್ದ ಮತ್ಸಗಂಧ ರೈಲಿಗೆ (Matsyagandha Train) ಜೋಡಿಸಿ ಕೇವಲ ಅಂಕೋಲಾವರೆಗೆ ಎಳೆ ತಂದಿದ್ದು ಮಾತ್ರವಲ್ಲದೇ ಅದೇ ಇಂಜಿನ್ ಅನ್ನು ಮುಂಬಯಿವರೆಗೆ(Mumbai) ಕಳಿಸಿ
ಪಂಚಗಂಗಾ ರೈಲನ್ನು ನಾಲ್ಕು ಗಂಟೆಗೂ ಹೆಚ್ವು ಕಾಲ ಯಾವ ಮಾಹಿತಿಯನ್ನೂ ನೀಡದೇ ಅಂಕೋಲಾದಲ್ಲಿ ನಿಲ್ಲಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಸಕಲೇಶಪುರ(Sakaleshapura) ದುರ್ಗಮ ಘಾಟ್ ಪ್ರದೇಶದಲ್ಲಿ ಸಂಚರಿಸ ಬೇಕಾದ ಕಾರಣ ಪಂಚಗಂಗಾ ರೈಲಿನ ಸಮಯ ಪಾಲನೆ ಅತ್ಯಂತ ಮಹತ್ವದ್ದಾಗಿದ್ದು , ಕೊಂಕಣ ರೈಲ್ವೆಯ ಬೇಕಾ ಬಿಟ್ಟಿ ನಿರ್ಧಾರಕ್ಕೆ ಪಂಚಗಂಗಾ ರೈಲು(Panchaganga Train) ಬೆಂಗಳೂರಿಗೆ ಮರುದಿನ ಮದ್ಯಾಹ್ನ ತಲುಪಿದೆ.
ಕೊಂಕಣ ರೈಲ್ವೆ(Konkan Railway) ಸಂಪೂರ್ಣ ಇಲೆಕ್ಟ್ರಿಪಿಕೇಶನ್ ಆದ ಮಾರ್ಗ. ಇಲ್ಲಿ ಬೇಕಾದಷ್ಟು ವಿದ್ಯುತ್ ಇಂಜಿನ್ ಗಳು ಸಿಗುತ್ತವೆ. ಹಾಗೆಯೇ ಮತ್ಸಗಂಧ ರೈಲು ಸಂಪೂರ್ಣ ವಿದ್ಯುತ್ ಇಂಜಿನ್ ಮೂಲಕ ಓಡುತ್ತದೆ. ಆದರೆ ಪಂಚಗಂಗಾ ರೈಲು ಸಂಪೂರ್ಣ ಡಿಸೇಲ್ ಇಂಜಿನ್ ರೈಲಾಗಿದೆ.
ವಿದ್ಯುತ್ ರೈಲಿನ ಇಂಜಿನ್ ಹಾಳಾದಾಗ ಹತ್ತಿರದ ಮಡಗಾಂವ್ ನಿಂದ(Madagaum) ಲೋಕೋ ತರಿಸಬೇಕಾಗಿತ್ತು. ಅದನ್ನು ಬಿಟ್ಟು ಸರಿಯಾಗಿ ಓಡುತಿದ್ದ ಡಿಸೇಲ್ ಇಂಜಿನ್ ರೈಲಿನ ಇಂಜಿನ್ ಬಳಸಿ ಅಂಕೋಲಾವರೆಗೆ ಎಳೆದು ತಂದಿದ್ದರೆ ಅದನ್ನು ಒಪ್ಪಬಹುದಾದರೂ, ಅಂಕೋಲಾಗೆ ಬಂದ ನಂತರವೂ ಅದೇ ಇಂಜಿನ್ ಮುಂಬಯಿಗೆ ಕಳಿಸಿ ಪಂಚಗಂಗಾ ರೈಲನ್ನು ನಾಲ್ಕು ಘಂಟೆ ಅತಂತ್ರ ಮಾಡಿದ್ದು ಮಾತ್ರ ಕೊಂಕಣ ರೈಲ್ವೆಗೆ ರೈಲು ಓಡಾಟದ ಯಾವ ಗಂದಗಾಳಿಯೂ ಇನ್ನೂ ಸಿಗದೇ ಇರುವುದರ ಸಾಕ್ಷಿ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆಯಾ