ಭಟ್ಕಳ :  ಜಿಲ್ಲೆಯಲ್ಲೆಡೆ ಕನ್ನಡ ರಾಜ್ಯೋತ್ಸವವನ್ನ ಅತಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಆದರೆ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಅವರು ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ಹಿಂದೇಟು ಹಾಕಿದ  ಘಟನೆ ನಡೆದಿದೆ.

ನವೆಂಬರ್ ಒಂದು ಇಂದು ತಾಲೂಕಾ ಕ್ರೀಡಾಂಗಣದಲ್ಲಿ  ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ   ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ  ಸಹಾಯಕ ಆಯುಕ್ತರು ಧ್ವಜಾರೋಹಣ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಗಣ್ಯರು ಕನ್ನಡ ಭುವನೇಶ್ವರಿ ದೇವಿಯ ಫೋಟೋ ಗೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಪುಷ್ಪ ನಮನ ಸಲ್ಲಿಸಲು ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಖಾಜಿಯಾಗೆ ತಿಳಿಸಿದರು. ಆದರೆ ಈ ವೇಳೆ ಪುಷ್ಪ ನಮನ ಸಲ್ಲಿಸಲು ಅಧ್ಯಕ್ಷೆ ನಿರಾಕರಿಸಿದರು. ನಂತರ ಮತ್ತೆ ಸಹಾಯಕ ಆಯುಕ್ತೆ ಡಾ.ನಯನ ಕೂಡ ತಿಳಿಸಿದಾಗಲೂ ಕೂಡ ನಿರಾಕರಿಸಿ ಆ ಗೌರವ ಸಲ್ಲಿಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ.

ಕರ್ನಾಟಕದಲ್ಲೇ ಹುಟ್ಟಿ, ಕರ್ನಾಟಕದ ಸೌಲಭ್ಯ ಪಡೆದು, ಕನ್ನಡಿಗರಿಂದಲೇ ಆಯ್ಕೆಯಾದ ಜನ ಪ್ರತಿನಿಧಿಗಳು ಈ ರೀತಿ ಅಗೌರವ ಸಲ್ಲಿಸಿದರೆ ಸ್ಥಾನದ ಕಿಮ್ಮತ್ತು ಏನು ಎಂಬ ಪ್ರಶ್ನೆ ಎದ್ದಿದೆ. ಈ ರೀತಿ ಗೌರವ ತೋರಿಸುವುದಿದ್ದರೆ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇದೇ ವರ್ತನೆ ಅಧಿಕಾರಿಗಳು ಮಾಡಿದಿದ್ದರೆ ಕ್ರಮ ಆಗುತಿತ್ತು. ಜನಪ್ರತಿನಿಧಿಗಳಿಗೆ ಪ್ರಶ್ನಿಸುವವರು ಯಾರು?

ಇದನ್ನು ಓದಿ : ಪಂಚಗಂಗಾ ರೈಲ್ವೆ ಗೊಂದಲ

ಶಕ್ತಿ ಯೋಜನೆ ಸ್ಥಗಿತವಾಗುವ ಆತಂಕ