ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಆರ್ಪೋರಾದಲ್ಲಿನ   ನೈಟ್‌ಕ್ಲಬ್ ಅಗ್ನಿ ದುರಂತ(Night Club Fire Tragedy) ಪ್ರಕರಣಕ್ಕೆ ಸಂಬಂಧಿಸಿದಂತೆ  ಕ್ಲಬ್ ಮಾಲೀಕರಲ್ಲಿ  ಓರ್ವರಾದ ಅಜಯ್ ಗುಪ್ತಾ  ಎಂಬುವವರನ್ನ  ಗೋವಾ ಪೊಲೀಸರು(Goa Police) ದೆಹಲಿಯಲ್ಲಿ ಬಂಧಿಸಿದ್ದಾರೆ.

ಗೋವಾದ ಆರ್ಪೋರಾದಲ್ಲಿರುವ  ‘ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್‌’ನಲ್ಲಿ ಡಿಸೆಂಬರ್ ಆರರಂದು ರಾತ್ರಿ  ಸಂಭವಿಸಿದ ಬೆಂಕಿ ಅವಘಡದಲ್ಲಿ(Fire Incident) 25 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ನಿಯಮ ಮೀರಿ ಕ್ಲಬ್ ನಡೆಸುತ್ತಿರುವುದು   ಗೊತ್ತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು ನೈಟ್‌ಕ್ಲಬ್ ಮಾಲೀಕರಲ್ಲಿ(Night Club Owner) ಓರ್ವರಾದ ಅಜಯ್ ಗುಪ್ತಾ ಅವರನ್ನು ವಶಕ್ಕೆ ಪಡೆದು  ಗೋವಾಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.

ದೆಹಲಿ ನಿವಾಸದಲ್ಲಿ ಗುಪ್ತಾ ಅವರನ್ನು ಪತ್ತೆ ಹಚ್ಚಲು ಮೊದಲು ಸಾಧ್ಯವಾಗದ ಕಾರಣಕ್ಕಾಗಿ  ಲುಕ್ ಔಟ್ ಸರ್ಕ್ಯುಲ‌ರ್ (LOC) ಹೊರಡಿಸಲಾಗಿತ್ತು.  ಇನ್ನಿಬ್ಬರು ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಸಹೋದರರು ಥಾಯ್ಲೆಂಡ್‌ಗೆ(Thailand) ಪರಾರಿಯಾಗಿದ್ದಾರೆ. ಅವರನ್ನು ವಶಕ್ಕೆ ಪಡೆಯಲು ಇಂಟರ್‌ಪೋಲ್, ಬ್ಲ್ಯೂ ಕಾರ್ನರ್ ನೋಟಿಸ್‌ ಜಾರಿ ಮಾಡಲಾಗಿದೆ.

ಇಲ್ಲಿವರೆಗೆ ದುರಂತ(Tragedy)  ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ನೈಟ್‌ಕ್ಲಬ್‌ನ ಪ್ರಧಾನ ವ್ಯವಸ್ಥಾಪಕ ರಾಜೀವ್‌ ಮೋದಕ್, ವ್ಯವಸ್ಥಾಪಕ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ನು ಠಾಕೂರ್ ಮತ್ತು ಕ್ಲಬ್ ಉದ್ಯೋಗಿ ಭರತ್ ಕೊಹ್ಲಿ ಬಂಧಿತರಾಗಿದ್ದಾರೆ.

ಮತ್ತೊಬ್ಬ ಮಾಲೀಕ ಬ್ರಿಟನ್ ಮೂಲದ(Britain Native) ಸುರಿಂದರ್ ಕುಮಾ‌ರ್ ಖೋಸ್ಲಾ ವಿರುದ್ಧವೂ ನೋಟಿಸ್ ಜಾರಿಗೊಳಿಸಲಾಗಿದೆ.  ಗೋವಾದಲ್ಲಾದ ನೈಟ್ ಕ್ಲಬ್ ದುರಂತ(Goa Night Club) ಇಲ್ಲಿನ ಪ್ರವಾಸೋದ್ಯಮದ ಮೇಲೆ ಪರಿಣಾಮ(Tourism Effect) ಬೀರಿದೆ.

ಇದನ್ನು ಓದಿ : ಕಾರವಾರ ಜೈಲಿನಲ್ಲಿ ಮತ್ತೆ ಗಲಾಟೆ.‌ ಮಂಗಳೂರು ಮೂಲದ ಆರು ಖೈದಿಗಳಿಂದ ರಂಪಾಟ.

ಮಲ್ಪೆಯಲ್ಲಿ ಸಿಕ್ಕಿ ಬಿದ್ದಿದ್ದ ಅಕ್ರಮ ಬಾಂಗ್ಲಾ ವಲಸಿಗರಿಗೆ ಶಿಕ್ಷೆ.

ಗೋವಾದ ನೈಟ್ ಕ್ಲಬ್ ಮಾಲೀಕರು ವಿದೇಶಕ್ಕೆ ಎಸ್ಕೇಪ್. ಮತ್ತೊಂದು ಕ್ಲಬ್ ಉಡೀಸ್ ಮಾಡಿದ ಸರ್ಕಾರ.

ಮದ್ಯ ಸಾಗಿಸುತ್ತಿದ್ದ ಆಸಾಮಿ ಬೈಕ್ ಬಿಟ್ಟು ಪರಾರಿ. ಅಬಕಾರಿ ಕಾರ್ಯಾಚರಣೆ.