ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಉತ್ತರಪ್ರದೇಶ ಮಹಿಳಾ ಆಯೋಗ(Uttarapradesha Women Commission) ಮಹಿಳೆಯರ ಸುರಕ್ಷತೆ (Women Saftey) ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇನ್ಮುಂದೆ ಪುರುಷ ಟೈಲರ್‌ಗಳು ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳ ದೇಹದ ಅಳತೆ ತೆಗೆದುಕೊಳ್ಳುವಂತಿಲ್ಲ ಎಂದು ಮಹಿಳಾ ಆಯೋಗವು(Women Commission) ಹೇಳಿದೆ.
ಯೋಗ (Yoga) ಹಾಗೂ ಜಿಮ್‌ಗಳಲ್ಲಿ(Jim) ಹೆಣ್ಣುಮಕ್ಕಳಿಗೆ ಪುರುಷರು ತರಬೇತಿ ನೀಡುವುದನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕ (Public) ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸಲು ಶಾಲಾ ಬಸ್‌ಗಳಲ್ಲಿ ಸಹ ಮಹಿಳಾ ಭದ್ರತಾ(Women Security) ಸಿಬ್ಬಂದಿಯನ್ನಿರಿಸುವುದು, ಮಹಿಳಾ ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಬೇಕು. ಅಲ್ಲದೇ ಕೋಚಿಂಗ್ ಸೆಂಟರ್‌ಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ(CCTV Camera) ಕಣ್ಗಾವಲು, ಡಿವಿಆರ್ (DVR) ಕಡ್ಡಾಯವಾಗಿ ಇರಬೇಕೆಂದು ತಿಳಿಸಿದೆ. ಮಹಿಳೆಯರಿಗೆ ಸರಿಯಾದ ವಿಶ್ರಾಂತಿ ಕೊಠಡಿಯನ್ನು(Rest Room) ಹೊಂದಿರಬೇಕು. ಮಹಿಳೆಯರ ಉಡುಪುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ಸಹಾಯಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ತಿಳಿಸಲಾಗಿದೆ.
ಇತ್ತೀಚಿಗೆ ನಡೆದ ಸಭೆಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅಲ್ಲಿ ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ವಿವಿಧ ಸಲಹೆಗಳನ್ನು ನೀಡಿದರು. ಮಹಿಳಾ ಸುರಕ್ಷತೆಗಾಗಿ ಹಲವು ಕ್ರಮಗಳ ಪ್ರಸ್ತಾವನೆಗಳ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ತಿಳಿಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ
ಬೇಲೆಕೇರಿ ಪ್ರಕರಣ. ಸಿಬಿಐ ಗೆ ಹೈಕೋರ್ಟ್ ನೋಟೀಸ್