ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) : ತಾಲೂಕಿನ ಬನವಾಸಿ ಹೋಬಳಿ(Banavasi Hobli) ವ್ಯಾಪ್ತಿಯ ಕುಪ್ಪಗಡ್ಡೆ ಮತ್ತು ವದ್ದಲ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮಾರ್ಗ ಕಡಿತಗೊಂಡಿರುವುದರಿಂದ ಜನತೆಗೆ ತೊಂದರೆಯಾಗಿದೆ.

ಅಕ್ಕಪಕ್ಕದ ಹತ್ತಾರು ಹಳ್ಳಿಗಳನ್ನು ದಾಸನಕೊಪ್ಪ (Dasanakoppa) ಬನವಾಸಿ ಮುಖ್ಯ ರಸ್ತೆಗೆ ಸಂಪರ್ಕಿಸುವ  ಪ್ರಮುಖ ಸಾರ್ವಜನಿಕ ರಸ್ತೆ ಮಾರ್ಗ ಒತ್ತುವರಿಯಾಗಿ ಸಂಪರ್ಕ ಕಡಿತವಾಗಿದೆ.  ಇದರಿಂದ ಈ ಭಾಗದ ಮನೆಗಳಿಗೆ, ಅಕ್ಕಪಕ್ಕದ ರೈತರ ಜಮೀನುಗಳಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಹಿವಾಟು ಮಾಡಲು ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ.

ಇತ್ತಿಚೆಗೆ ರಾಜ್ಯ ಸರ್ಕಾರ “ನಕಾಶೆ ಕಂಡ ಕಾಲು ದಾರಿ, ಬಂಡಿ ದಾರಿ ತೆರವುಗೊಳಿಸಿ ಸಂಪರ್ಕ ಕಲ್ಪಿಸಿ’ ಅನುಕೂಲ ಮಾಡಿಕೊಡುವಂತೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ  ತೆರವುಗೊಳಿಸುವ ಸಂಪೂರ್ಣ ಕಾನೂನು ಅಧಿಕಾರ ತಹಶೀಲ್ದಾರ್ ಅವರಿಗೆ ಅಧಿಕಾರ ಇದೆ. ಈ ಬಗ್ಗೆ ಈ ಭಾಗದ ನಾಗರಿಕರು  ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಅವರು ಕೂಡಲೇ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಜನರ ಬೇಡಿಕೆ ಈಡೇರಿಲ್ಲ. ಹೀಗಾಗಿ ಅಧಿಕಾರಿಗಳು ಗ್ರಾಮದ ನಾಗರಿಕರ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ಮತ್ತೊಂದು ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ಪಂಗನಾಮ ?

ಲಿಂಕ್ ರಸ್ತೆಯಲ್ಲಿ ಮತ್ತೆ ಕಳ್ಳರ ಕರಾಮತ್ತು. ಪೊಲೀಸರಿಂದ ತನಿಖೆ

ಗೊಬ್ಬರ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು.