ಭಟ್ಕಳ(Bhatkal) : ಮುಸ್ಲಿಮರ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆ ತಂಜಿಮ್(Tanzeem) ಕರೆ ನೀಡಿದ ಬಂದ್ ಗೆ  ಭಟ್ಕಳದಲ್ಲಿ ಮುಸ್ಲಿಂ (Muslims) ಬಾಹುಳ್ಯ ಇರುವ ಪ್ರದೇಶಗಳಲ್ಲಿ ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಉಳಿದೆಡೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.

ಉತ್ತರಪ್ರದೇಶ (Uttarapradesh) ದಾಸ್ನಾದೇವಿ ದೇವಾಲಯದ (Dasnadevi temple) ಯತಿ ಸ್ವಾಮಿ ನರಸಿಂಹಾನಂದ(Yati Narasimhananda ) ಅವರ ಹೇಳಿಕೆಗೆ ಖಂಡಿಸಿ ಇಂದು ಬೆಳಿಗ್ಗೆಯಿಂದ ನಾಳೆ ಬೆಳಿಗ್ಗೆ ವರೆಗೆ ಬಂದ್ (Bund) ಕರೆ ನೀಡಲಾಗಿತ್ತು.

ಹೀಗಾಗಿ ಭಟ್ಕಳ ಮುಖ್ಯ ರಸ್ತೆ (Bhatkal main road) ಅಕ್ಕಪಕ್ಕದಲ್ಲಿರುವ ಮುಸ್ಲಿಂ ಬಾಂಧವರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಾಗಿಲು ಮುಚ್ಚಿವೆ. ಆದರೆ ಇತರೆ ಧರ್ಮಿಯರು ಸ್ಪಂದಿಸದಿರುವುದು ಕಂಡು ಬಂದಿದೆ. ಸುಲ್ತಾನ್ ಸ್ಟ್ರೀಟ್(Sultan street), ಬರ್ಮಾ ಬಜಾರ್(Barma bazar) ರೋಡ್ ಸೇರಿದಂತೆ ಇತರ ಕಡೆಗಳಲ್ಲಿ ಅಂಗಡಿಗಳು ಬಂದ್ ಇವೆ.

ಮೀನು ಮಾರುಕಟ್ಟೆಯಲ್ಲೂ(Fish market) ಕೂಡ ಒಂದು ಕೋಮಿನವರು ಹೊರತುಪಡಿಸಿ ಉಳಿದವರು ಮೀನು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು. ಆಟೋ, ಟೆಂಪೋ ಸೇರಿದಂತೆ ಇತರೆ ವಾಹನಗಳು ಸಂಚಾರ ನಡೆಸಿದ್ದವು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ತಂಜಿಮ್ ನೇತೃತ್ವದಲ್ಲಿ ಪ್ರತಿಭಟನೆ

ಹಂತಕರ ಜಾಡು ಹಿಡಿದು ಅರಣ್ಯ ಇಲಾಖೆ ದಾಳಿ