ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕೊಪ್ಪಳ(Koppal) : ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಪ್ರಾಪ್ತ ಬಾಲಕಿಯೋರ್ವಳು(Minor Girl) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕರಣದ ಹಿಂದೆ ಸ್ವಂತ ಅಣ್ಣನ ಕೃತ್ಯ ಎಂಬುದು ಬೆಳಕಿಗೆ ಬಂದಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ(Koppal Rural Police Station) ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸುವ ಆಘಾತಕಾರಿ ಸಂಗತಿಯಾಗಿದೆ.
ಆಸ್ಪತ್ರೆಗೆ ದಾಖಲಾದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ವೈದ್ಯಕೀಯ ಪರೀಕ್ಷೆಯಲ್ಲಿ(Medical Examination) ಗರ್ಭಿಣಿ(Pregnancy) ಎಂಬ ಕಹಿ ಸತ್ಯ ಬಯಲಾಗಿದೆ. ಬಾಲಕಿ ತಾಯಿಯಾಗಿರುವ ವಿಷಯ ಕುಟುಂಬಕ್ಕೆ ಆಘಾತ ನೀಡಿದೆ. ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಬಾಲಕಿ ಸತ್ಯವನ್ನು ಹೇಳಿದ್ದಾಳೆ. ಆಕೆಯ 21 ವರ್ಷದ ಸ್ವಂತ ಸಹೋದರನೇ ಇದಕ್ಕೆ ಕಾರಣ ಎಂದಿದ್ದಾಳೆ.
ವಿಷಯ ತಿಳಿದ ಕೊಪ್ಪಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ(Focso Act) ಪೊಲೀಸರು ಆರೋಪಿ ಸಹೋದರನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ(Police Investigation) ಮುಂದುವರಿಸಿದ್ದಾರೆ.
ಇದನ್ನು ಓದಿ : ಕಾರವಾರದ ಹುಡುಗಿ ಮಿನಿ ಓಲಂಪಿಕ್ ಗೇಮ್ ನಲ್ಲಿ ಪ್ರಥಮ.
ಪ್ರೇಕ್ಷಕರ ಮನ ಗೆದ್ದ ಖ್ಯಾತ ಕಳ ನಟ ಹರೀಶ ರಾಯ್ ವಿಧಿ ವಶ.
ಜೊಯಿಡಾ ತಾಲ್ಲೂಕಿನಲ್ಲಿ ಅಪರೂಪದ ಹೈನಾ ಪ್ರಾಣಿ ಕಾಣಿಸಿಕೊಂಡು ಸಂಚಲನ.
ಭಟ್ಕಳ ಗ್ರಾಹಕರಿಗೆ ಮಕ್ಮಲ್ ಟೋಪಿ. ತಿಂಗಳ ಹಿಂದೆ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಇಲಾಖೆ.
ಯುಟ್ಯೂಬರ್ ಮುಕಳೆಪ್ಪ ಕೊಟ್ಟ ಕಷಾಯ ಹಿನ್ನಲೆ. ಉಪನೋಂದಣಾಧಿಕಾರಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ.

