ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ತಾಲ್ಲೂಕಿನ ಮುಂಡಳ್ಳಿಯ ನೀರಗದ್ದೆ ಗುಡ್ಡದ  ಮೇಲೆ ಎಮ್ಮೆಹತ್ಯೆಗೈದು ಶಿರ ಎಸೆದು ಹೋದ   ಪ್ರಕರಣಕ್ಕೆ  ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ಗ್ರಾಮೀಣ ಠಾಣೆ(Bhatkal Rural Police) ಪೊಲೀಸರು  ಯಶಸ್ವಿಯಾಗಿದ್ದಾರೆ.

ಮುಂಡಳ್ಳಿಯ ಸತ್ಯನಾರಾಯಣ ನಗರದ ಹೊನ್ನಪ್ಪ ಈರಯ್ಯ ನಾಯ್ಕ  ಎಂಬುವವರ  ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯನ್ನು ಕಳ್ಳತನ ಮಾಡಿ  ಹಿಂಸಾತ್ಮಕವಾಗಿ ವಧೆ ಮಾಡಿ ತಲೆಯನ್ನು ಕತ್ತರಿಸಿ   ಮುಂಡಳ್ಳಿ ನೀರಗದ್ದೆಯ(Mundalli Neeragadde) ಮಾರಕಲ್ಲ ಗದ್ದೆಯ  ಖಾಲಿ ಜಮೀನಿನಲ್ಲಿ ಏಸೆದು ಹೋಗಿದ್ದರು. ಈ  ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು  ಆರೋಪಿತರಾದ  ಮೂಸಾ ನಗರದ ಅಬ್ದುಲ್ ಹುಸೇನ ತಂದೆ ಮೊಹಮ್ಮದ್ ಜಾಫರ್ ಇಳೆಗಾರ (22) ಮತ್ತು ಮದರಸಾದಲ್ಲಿ ಶಿಕ್ಷಕನಾಗಿದ್ದ  ಕಾರಗದ್ದೆ ನಿವಾಸಿ ಮೊಹಮ್ಮದ್ ಇಬ್ರಾಹಿಂ ತಂದೆ ಅಲಿ ಖಲಿಫಾ  (55) ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ಹಾಗೂ ಗ್ರಾಮೀಣ ಠಾಣೆ ಪಿ.ಎಸ್ ಐ ರನ್ನಗೌಡ ಅವರ ನೇತೃತ್ವದಲ್ಲಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಇದನ್ನು ಓದಿ : ಕದ್ರಾ-ಕೊಡ್ಸಳ್ಳಿ ಮಾರ್ಗದಲ್ಲಿ ಗುಡ್ಡ ಕುಸಿತ. ಹಿಂದೆ ಎಚ್ಚರಿಕೆ ನೀಡಿದ್ದ ಭೂ ವಿಜ್ಞಾನಿಗಳು