ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಸಂಚಾರ ನಿಯಮದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ (Helmet) ಧರಿಸುವಂತೆ  ಜಾಗ್ರತಿ ಮೂಡಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೈಕ್ ಜಾಥಾಕ್ಕೆ(Bike Rally)  ಚಾಲನೆ ದೊರೆಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್(SP Deep an M N) ಅವರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳು ಕಾರವಾರ(Karwar) ನಗರ ಮತ್ತು ಚಿತ್ತಾಕುಲ(Chittakul) ಭಾಗದಲ್ಲಿ ಬೈಕ್ ರ್ಯಾಲಿ ನಡೆಸಿದರು. ಸ್ವತಃ ಎಸ್ಪಿ ದೀಪನ್ ಅವರು ಬೈಕ್ ರೈಡ್ ಮಾಡಿ ಅರಿವು ಮೂಡಿಸಿದರು.

ಕಾರವಾರದ ಜಿಲ್ಲಾ ಪೋಲಿಸ್ ಮೈದಾನದಿಂದ(District Police Ground) ಪ್ರಾರಂಭಗೊಂಡ ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅವರು, ಉತ್ತರಕನ್ನಡ ಜಿಲ್ಲೆಯಲ್ಲಿ 2024 ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಘಾತವಾದ 33 ಪ್ರಕರಣದಲ್ಲಿ 18 ಜನ ಸಾವಿಗೀಡಾಗಿದ್ದಾರೆ. 2025 ರಲ್ಲಿ 64 ಪ್ರಕರಣ ದಾಖಲಾಗಿದ್ದು 35 ಜನ ಅಸುನಿಗಿದ್ದಾರೆ.  2023 ರಿಂದ ಇಲ್ಲಿಯವೆರೆಗೆ 745 ಮದ್ಯಪಾನ ಮಾಡಿ ಅತೀ ವೇಗದ ವಾಹನ ಚಾಲನೆ ಕುರಿತಾಗಿ ಪ್ರಕರಣ ದಾಖಲಾಗಿದ್ದು, 467 ಜನರ ಡ್ರೈವಿಂಗ್ ಲೈಸನ್ಸ್(Driving Licence) ರದ್ದು ಪಡಿಸಲಾಗಿದೆ ಎಂದರು.

ವರ್ಷದಿಂದ ವರ್ಷಕ್ಕೆ ಹೆಲ್ಮೆಟ್(Helmet) ಧರಿಸದೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹಾಗೂ ಮದ್ಯಪಾನ ಮಾಡಿ ಅತೀ ವೇಗದ ವಾಹನ ಚಾಲನೆ ಮಾಡುವ ಪ್ರಕರಣದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕಿನಲ್ಲಿಯೂ ಇಂಥ ಜಾಗೃತಿ ರ್ಯಾಲಿ ನಡೆಸುವ ಮುಲಕ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಪ್ರಾಣಉಳಿಸಿಕೊಳ್ಳಬೇಕೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಭೀಕರ ಅಪಘಾತ. ಬೈಕ್ ಸವಾರ ದುರ್ಮರಣ

ಮಕ್ಕಳ ಸಾವು ತರುತ್ತಿರುವ ಕೆಮ್ಮಿನ ಸಿರಪ್. ದೇಶಾದ್ಯಂತ ‌ಕಟ್ಟೆಚ್ಚರ.