ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಮಾಡಿd ಸಾಲ ತೀರಿಸಲು ಹುಟ್ಟಿದ ಮಗುವನ್ನ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ಹಳೆ ದಾಂಡೇಲಿಯಲ್ಲಿ (Old Dandeli) ನಡೆದಿದೆ.
ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಕರ ಎಂಬುವವರು ನಗರ ಪೊಲೀಸ್ ಠಾಣೆಯಲ್ಲಿ(Town Police Station) ದೂರು ನೀಡಿದ್ದರು. ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಹಳೆದಾಂಡೇಲಿಯ ಸ್ವಾಮಿಲ್ ರಸ್ತೆಯ ನಿವಾಸಿ ಮಾಹೀನ ವಸೀಂ ಚಂಡುಪಟೇಲ್ ಮತ್ತು ವಸೀಂ ನಜೀರ್ ಚಂಡುಪಟೇಲ್ ಎಂಬವವರ ವಿಷಯ ಗೊತ್ತಾಗಿದೆ.
ಮಾಹೀನ ವಸೀಂ ಚಂಡುಪಟೇಲ್ ಹೆರಿಗಾಗಿ ಹಳೆ ದಾಂಡೇಲಿಯ ದೇಶಪಾಂಡೆ ನಗರದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದಳು. ಜೂನ್ 17ರಂದು ಈಕೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಂಘದ ಸಾಲಗಾರರು ಸಾಲದ ಹಣವನ್ನು ಕೊಡುವಂತೆ ಪದೇಪದೇ ಕಿರಿಕಿರಿ ಮಾಡುತ್ತಿದ್ದ ಹಿನ್ನಲೆಯಲ್ಲಿ ಇವಳು ಹಾಗೂ ಇವಳ ಪತಿ ವಸೀಂ ನಜೀರ್ ಚಂಡುಪಟೇಲ್ ಸೇರಿ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿ, ಮಗುವನ್ನು ಧಾರವಾಡಕ್ಕೆ ಹೋಗಿ ಬೆಳಗಾವಿಯ ನೂರ್ ಅಹಮ್ಮದ್ ಎಂಬಾತನಿಗೆ ಮೂರು ಲಕ್ಷ ರೂಪಾಯಿ ಹಣಕ್ಕೆ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ ಮತ್ತು ಜಗದೀಶ.ಎಂ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜೈಪಾಲ್ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಬಸವರಾಜ ಒಕ್ಕುಂದ, ಪೊಲೀಸ್ ಸಿಬ್ಬಂದಿಗಳಾದ ಸಿದ್ರಾಮ್ ರಾಮರಥ, ಚಂದ್ರಶೇಖರ ಪಾಟೀಲ್, ಜ್ಯೋತಿ ಬಾಳೇಕರ, ಮಹಾಂತೇಶ ಜಾಮಗೌಡ ಅವರ ತಂಡ ಬೆಳಗಾವಿಗೆ ಹೋಗಿ ಆಪಾದಿತರನ್ನು ಹಾಗೂ ಮಾರಾಟ ಮಾಡಿದ್ದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಮಗುವನ್ನು ಶಿರಸಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ(Child Welfare Committee) ಶುಕ್ರವಾರ ಹಾಜರುಪಡಿಸಲಾಗಿದೆ.
ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ(Belagavi District) ಆನಗೋಳದ ನಿವಾಸಿಗಳಾದ ನೂರು ಮಹಮ್ಮದ್ ಅಬ್ದುಲ್ ಮಜೀದ್ ನಾಯ್ಕ ಮತ್ತು ಕಿಶನ್ ಶ್ರೀಕಾಂತ ಐರೇಕರ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆಪಾದಿತರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಇದನ್ನು ಓದಿ : ಭಟ್ಕಳ ಪೊಲೀಸ್ ಠಾಣೆಗೆ ಬಂತು ಇಮೇಲ್ ಸಂದೇಶ. ಬಾಂಬ್ ಸ್ಪೋಟಿಸುವ ಬೆದರಿಕೆ.
ಕಾರವಾರದಲ್ಲಿ ತಪ್ಪಿದ ಬಾರೀ ಅನಾಹುತ. ಮರ ತೆರವುಗೊಳಿಸುವ ವೇಳೆ ಬುಡ ಸಮೇತ ಕೆಳಕ್ಕೆ ಬಿದ್ದ ಕಾರ್ಮಿಕ. ಬಚಾವ್.
ಕಾರವಾರ ಜಿಲ್ಲಾಸ್ಪತ್ರೆಯ ಸರ್ಜನ್ ಡಾ ಶಿವಾನಂದ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ.