ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಯಲ್ಲಾಪುರ (Yallapur) : ಬಾಲಕನ ಮೇಲೆ ಕತ್ತಿಯಿಂದ ಹಲ್ಲೆಗೆ ಮುಂದಾದ ರೌಡಿ ಶೀಟರ್(Rowdy Sheeter) ಓರ್ವನಿಗೆ ಪೊಲೀಸರು ಗುಂಡಿನ ಏಟು ನೀಡಿದ್ದಾರೆ.
ಉತ್ತರಕನ್ನಡ(Uttarakannada) ಜಿಲ್ಲೆಯ ಯಲ್ಲಾಪುರ(Yallapur) ತಾಲೂಕಿನ ಅಣ್ಣಿಗೇರಿ ಬಳಿ ಭಾನುವಾರ ಘಟನೆ ನಡೆದಿದೆ. ಜೋಯಿಡಾ(Joida) ತಾಲೂಕಿನ ರಾಮನಗರದ(Ramanagar) ರೌಡಿ ಶೀಟರ್ ಪ್ರವೀಣ್ ಸುದೀರ್ ಕಾಲಿಗೆ ಗುಂಡೇಟು ನೀಡಲಾಗಿದೆ. ಜಾತಿನಿಂದನೆ, ದರೋಡೆ , ಪೊಲೀಸರ ಮೇಲೆ ದೌರ್ಜನ್ಯ, ಮಹಿಳೆಯರ ಮಕ್ಕಳ ದೌರ್ಜನ್ಯ ಹಲ್ಲೆ ಪ್ರಕರಣ ಸೇರಿದಂತೆ 16 ಪ್ರಕರಣದ ಆರೋಪಿಯಾಗಿದ್ದ ಪ್ರವೀಣ್ ಸುದೀರ್ ಗೆ ಬುದ್ದಿ ಕಲಿಸಿದ್ದಾರೆ.
ಪ್ರವೀಣ್ ಸುದೀರ್ , ಸಾಕ್ಷೀದಾರರನ್ನು ಹೆದರಿಸಿ ಪ್ರಕರಣವನ್ನು ಹಿಂಪಡೆಯುವಂತೆ ಮಾಡುತಿದ್ದುದಲ್ಲದೇ, ವಾರೆಂಟ್ ಜಾರಿ ಮಾಡಲು ಹೋದ ಪೊಲೀಸರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದ. ಕಳೆದ ಮೂರು ತಿಂಗಳಿಂದ ತಲೆಮರಿಸಿಕೊಂಡಿದ್ದು ಯಲ್ಲಾಪುರ ಭಾಗದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪಿಎಸ್ಐ ಮಹಾಂತೇಶ್ , ಸಿಬ್ಬಂದಿಗಳಾದ ಜಾಫರ್ ಅಸ್ಲಂ, ಮಲ್ಲಿಕಾರ್ಜುನ್ ಹೊಸಮನಿ ತಂಡ ಆತನ ಬಂಧನಕ್ಕೆ ತೆರಳಿದ್ದರು. ಈ ವೇಳೆ ಕಲ್ಲಿನಿಂದ ಹಲ್ಲೆ ಮಾಡಿ ಚಾಕು ಇರಿಯಲು ಪ್ರಯತ್ನ ಮಾಡಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಪಿಎಸ್ಐ ಮಹಾಂತೇಶ್ ಆತನ ಬಲಗಾಲಿಗೆ ಫೈರ್ ಮಾಡಿದ್ದಾರೆ.
ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ(Yallapur police Station) ಪ್ರಕರಣ ದಾಖಲಾಗಿದೆ. ಗಾಯಗೊಂಡ ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ರಾಮನಗರದಲ್ಲಿಶಾಲಾಬಾಲಕನಿಗೆಕತ್ತಿತೋರಿಸಿದ್ದುಈತನೇ :
ಶಾಲಾ ಮಕ್ಕಳ ನಡುವೆ ನಡೆದ ಗಲಾಟೆ ವಿಷಯದಲ್ಲಿ ರೌಡಿ ಶೀಟರ್ ಪ್ರವೀಣ್ ಸುದೀರ್ ಕತ್ತಿ ಬೀಸಿ ಕೊಲ್ಲೋದಾಗಿ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆಗಿತ್ತು. ಈತನ ಮಗ ಅಪ್ಪನ ಹಾದಿ ಹಿಡಿದಿದ್ದು ತನ್ನ ತರಗತಿ ಮಕ್ಕಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ತಂದೆ ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರು.
ಹೀಗಾಗಿ ತನ್ನ ಪುತ್ರನ ವಿರುದ್ಧ ಶಾಲೆಯಲ್ಲಿ ದೂರು ನೀಡಿದ್ದೀರಿ, ನನ್ನ ಮಗನ ವಿರುದ್ಧ ಸುಳ್ಳು ಹೇಳ್ತೀರಾ ಎಂದು ಅವಾಚ್ಯವಾಗಿ ನಿಂದಿಸಿ ಬಾಲಕನ ಮೇಲೆ ಕತ್ತಿ ಬೀಸಿ ಹಲ್ಲೆಗೆ ಮುಂದಾಗಿದ್ದನು.ಈ ವೇಳೆ ಬಾಲಕ ತಪ್ಪಿಸಿಕೊಂಡಿದ್ದನು. ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೇ ಆರೋಪಿ ಪ್ರಶಾಂತ್ ಸುಧೀರ್ ಹಾಗೂ ಆತನ ಪುತ್ರ ಸುಜಲ್ ಪರಾರಿಯಾಗಿದ್ದರು. ಆತನನ್ನ ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಇದನ್ನು ಓದಿ : ಭಟ್ಕಳ ಸ್ಪೋಟಿಸೋ ಬೆದರಿಕೆ ಸಂದೇಶ ಕಳಿಸಿದ್ದ ಮೋಸ್ಟ್ ವಾಂಟೆಡ್ ಆರೋಪಿ ಆರೆಸ್ಟ್.