ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ (Newdelhi) : ದೇಶದ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ. ವಿಶ್ವಸಂಸ್ಥೆಯು(WHO) ಜನಸಂಖ್ಯೆಯ ವರದಿಯನ್ನ ಬಹಿರಂಗಪಡಿಸಿದ್ದು ಸರಾಸರಿ ಫಲವತ್ತತೆಯಲ್ಲಿ ತೀವ್ರ ಕುಸಿತ ಕಾಣುತ್ತಿದೆ ಎಂದು ಹೇಳಿದೆ

ಭಾರತದಲ್ಲಿ ಜನಸಂಖ್ಯಾ(Population) ಬದಲಾವಣೆ ಆರಂಭದ ಮುನ್ಸೂಚನೆ ಎಂದು ಹೇಳಲಾಗಿದೆ. ಈ ಹಿಂದೆ 2.1 ಪ್ರಮಾಣದಲ್ಲಿದ್ದ ಭಾರತದ ಪ್ರತೀ ಮಹಿಳೆಯ ಸಂತಾನೋತ್ಪತಿ ಸರಾಸರಿ ಫಲವತ್ತತೆ ಈಗ 1.9ಕ್ಕೆ ಕುಸಿದಿದೆ. ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

1960ರಲ್ಲಿ ಭಾರತದ ಜನಸಂಖ್ಯೆ ಸುಮಾರು 43.6 ಕೋಟಿ ಇತ್ತು. ಈ ಅವಧಿಯಲ್ಲಿ ಮಹಿಳೆ ಸರಾಸರಿಯಾಗಿ ಸುಮಾರು ಆರು ಮಕ್ಕಳನ್ನು ಹೇರುತ್ತಿದ್ದರು. ಈಗ ಸರಾಸರಿ ಇಬ್ಬರು ಮಕ್ಕಳನ್ನು ಮಾತ್ರ  ಹೇರುತ್ತಿದ್ದಾರೆ. 150 ಕೋಟಿ ಆಸುಪಾಸಿನಲ್ಲಿರುವ ಜನಸಂಖ್ಯೆ 170 ಕೋಟಿಗೆ ಏರಿ ನಂತರ 40 ವರ್ಷಗಳ ಬಳಿಕ ಮತ್ತೆ ಇಳಿಕೆ ಕಂಡಿದೆ ಎಂದು ವರದಿ ಅಂದಾಜಿಸಿದೆ.  ಭಾರತದಲ್ಲಿ ಜನನ ದರ ಇಳಿಕೆಯಾಗಿದ್ದರೂ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ .

ಭಾರತ ದೇಶದಲ್ಲಿ 0-14ರ ವಯೋಮಾನದವರ ಸಂಖ್ಯೆ ಶೇ.24ರಷ್ಟಿದೆ. 10 ರಿಂದ 19ರ ವಯೋಮಾನದವರು ಶೇ.17ರಷ್ಟಿದ್ದಾರೆ. 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ.68ರಷ್ಟಿದೆ ಎಂದು ವರದಿ ಹೇಳುತ್ತಿದೆ.

ಭಾರತೀಯ ಮನುಷ್ಯನ ಜೀವಿತಾವಧಿ 2025ರಲ್ಲಿ ಸರಾಸರಿಯಾಗಿ ಪುರುಷರಲ್ಲಿ 71 ವರ್ಷ, ಮಹಿಳೆಯರಲ್ಲಿ 74 ವರ್ಷಕ್ಕೆ ಏರಿಕೆಯಾಗಿದೆ. 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪ್ರಸ್ತುತ ಏಳು ಪ್ರತಿಶತದಷ್ಟಿದೆ. ಇದೇ 2025ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 146 ಕೋಟಿಗೆ ತಲುಪಲಿದೆ ಎಂದು ವರದಿ ಹೇಳಿದೆ.

ಇದನ್ನು ಓದಿ : ಮೂರು ದಿನ ರೆಡ್ ಅಲರ್ಟ್: ಎಚ್ಚರವಹಿಸುವಂತೆ  ಜಿಲ್ಲಾಧಿಕಾರಿ ಸೂಚನೆ.

ಯುವಕನೊಂದಿಗೆ ಓಡಿ ಹೋದ  ಎರಡು ಮಕ್ಕಳ ತಾಯಿ.

ಆಕೆ ಅಂಥಿಂಥವಳಲ್ಲ. ಹದಿನಾಲ್ಕನೆ ಮದುವೆಗೆ ಸಿದ್ದಳಾದ ಚಾಲಾಕಿ ಪೊಲೀಸರ ಬಲೆಗೆ.