ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore) : ಇತ್ತೀಚಿಗೆ ಪತ್ತೆಯಾದ ಎಚ್‌ಎಂಪಿವಿ(HMPV) ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಎಚ್‌ಎಂಪಿವಿ ವೈರಸ್(HMPV Virus) ಕುರಿತು ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ(Central Government), ಎನ್ಸಿಡಿಸಿ(NCDC) ಜೊತೆ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ. ಚಳಿಗಾಲದ ಇತರೆ ಶ್ವಾಸಕೋಶ ಸೋಂಕಿನ ರೀತಿಯಲ್ಲಿಯೇ ಶೀತ ಮತ್ತು ಜ್ವರದ ಲಕ್ಷಣವನ್ನು ಎಚ್‌ಎಂಪಿವಿ (HMPV) ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ (State Health Department) ಪ್ರಕಟಣೆ
ನಾಗರಿಕರು ಏನು ಮಾಡಬೇಕು?:
* ಮಾಸ್ಕ್ ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಕೆ ಮಾಡಿ.
* ಪದೇ ಪದೇ ಕೈಯನ್ನು ಸೋಪ್ನಿಂದ ಅಥವಾ ಆಲ್ಕೋಹಾಲ್ ಸ್ಯಾನಿಟೈಸರ್ನಿಂದ ತೊಳೆಯಿರಿ.
* ಜನನಿಬಿಡ ಪ್ರದೇಶದಿಂದ ದೂರವಿರಿ.
* ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದರೆ, ಜನನಿಬಿಡ ಪ್ರದೇಶದಿಂದ ದೂರವಿರಿ.
* ನಿಮಗೆ ಹುಷಾರಿಲ್ಲದಿದ್ದರೆ, ಮನೆಯಲ್ಲಿ ಇರಿ ಮತ್ತು ಇತರರೊಂದಿಗೆ ಸೀಮಿತ ಸಂಪರ್ಕ ಸಾಧಿಸಿ.
* ಸಾಧ್ಯವಾದಷ್ಟು ನೀರು ಮತ್ತು ಪೋಷಕಾಂಶಯುಕ್ತ ಆಹಾರ ಸೇವಿಸಿ.
ದಯವಿಟ್ಟು ಇದನ್ನು ಮಾಡಬೇಡಿ:
* ಒಮ್ಮೆ ಬಳಸಿದ ಕರವಸ್ತ್ರ ಮತ್ತು ಟಿಶ್ಯೂ ಮರುಬಳಕೆ ಬೇಡ.
* ಅನಾರೋಗ್ಯಕ್ಕೆ ಒಳಗಾದ ನಿಮ್ಮ ಹತ್ತಿರದವರ ಟವೆಲ್, ಸೇರಿದಂತೆ ಇತರೆ ವಸ್ತುಗಳ ಬಳಕೆ ಬೇಡ.
* ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ.
* ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ.
* ವೈದ್ಯರ ಸಂಪರ್ಕಕ್ಕೆ ಒಳಗಾಗದೇ ಸ್ವಯಂ ಚಿಕಿತ್ಸೆ ಬೇಡ.
ಇದನ್ನು ಓದಿ : ಭಟ್ಕಳದಲ್ಲಿ ಬಸ್ ಹಾಯ್ದು ಪಾದಚಾರಿ ದುರ್ಮರಣ.
ಒಕ್ಕರಿಸಿತಾ ಚೀನಾ ವೈರಸ್. ರಾಜಧಾನಿ ಬೆಂಗಳೂರಲ್ಲಿ HMPV ಸೋಂಕು ಪತ್ತೆ.