ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿವಮೊಗ್ಗ (Shivamogga) : ಮಂಗವೊಂದು ಮೊಬೈಲ್ ಫೋನ್ ಎಗರಿಸಿ  ಯುವತಿಯೊಬ್ಬಳನ್ನ ಪೇಚಿಗೆ ಸಿಲುಕಿಸಿದ   ಘಟನೆ ಶಿವಮೊಗ್ಗದಲ್ಲಿ  ನಡೆದಿದೆ.

ಇಲ್ಲಿನ ಕುವೆಂಪು ರಸ್ತೆ ಸಮೀಪದಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್ ಆಗಿರುವ ಯುವತಿ ತನ್ನ ಮೊಬೈಲ್ ಅನ್ನು ಮಹಡಿ ಮೇಲಿನ ಕಿಟಕಿಯ ಬಳಿ ಇಟ್ಟು ತಮ್ಮ  ಕೆಲಸ ಮಾಡುತ್ತಿದ್ದರು. ಆ ವೇಳೆ ಮಂಗವೊಂದು  ಮೊಬೈಲನ್ನು ತೆಗೆದುಕೊಂಡು ಎಸ್ಕೇಪ್ ಆಗಿದೆ. ಹೊರ ಬಂದು ನೋಡಿದಾಗ ಆಸ್ಪತ್ರೆಯ ಪಕ್ಕದಲ್ಲಿದ್ದ ದೊಡ್ಡ ಮರವನ್ನೇರಿ ಮಂಗ ಕುಳಿತುಬಿಟ್ಟಿತು.

ಆಗಾಗ ಮೊಬೈಲನ್ನು ಎದೆಗೆ ಅವಚಿಕೊಳ್ಳುತ್ತಾ ಕೀಟಲೆ ಮಾಡುತಿತ್ತು.  ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಪರದೆ ಮೇಲೆ ತನ್ನ ಕೈಬೆರಳು ಆಡಿಸುತ್ತಾ, ಮೊಬೈಲ್ ಕಿವಿಗೆ ಹಿಡಿದು ಮಕ್ಕಳಂತೆ ಆಟವಾಡುತಿತ್ತು.

ಕಪಿ ಚೇಷ್ಠೆಯನ್ನ ನೋಡಲು ಸಾಕಷ್ಟು ಜನರು ಜಮಾಯಿಸಿದರು.   ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್ ಪಡೆಯುವ ಪ್ರಯತ್ನವನ್ನು ಮಾಡಿದರು. ಆದರೆ ಮಂಗ ಮೊಬೈಲು ಗಟ್ಟಿಯಾಗಿಯೇ ಹಿಡಿದು ಜಪ್ಪಯ್ಯ ಅನ್ನದೇ ಕುಳಿತುಬಿಟ್ಟಿತು. ಸುಮಾರು ಒಂದು ಗಂಟೆಗಳ ಕಾಲ  ಮೊಬೈಲ್ ಗೆ ಕರೆ ಮಾಡಿದರೂ ಮಂಗ ಬಿಡಲಿಲ್ಲ. ಮೊಬೈಲ್(Mobile) ವಾರಸುದಾರ ಯುವತಿ ಮೊಬೈಲ್ ನ್ನ ಸೈಲೆಂಟ್ ಮೋಡ್ ನಲ್ಲಿ ಇಟ್ಟಿದ್ದರಿಂದ ಮಂಗ ಆಗಾಗ ನೋಡಿ ಖುಷಿಪಡುತಿತ್ತು, ಬಾಳೆಹಣ್ಣು(Banana) ನೀಡಿ ಮೊಬೈಲ್ ಪಡೆಯುವ  ಪ್ರಯತ್ನಗಳು ನಡೆಸಲಾಯಿತು. ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಚೇಷ್ಟೆ ಮಾಡುತ್ತಲೆ ಇತ್ತು.

  ಹೀಗಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಜನರ ಗುಂಪನ್ನು ನೋಡಿ ಭಯಭೀತಗೊಂಡ ಮಂಗ ಮರದಿಂದ ಕೆಳಗೆ ಬರಲೇ ಇಲ್ಲ. ಸುಮಾರು ಹೊತ್ತಾದ ಬಳಿಕ ಮಂಗ ಬಾಳೆಹಣ್ಣನ್ನು ನೋಡಿ ಆಸ್ಪತ್ರೆಯ ಸ್ಲಾಬ್ ಮೇಲೆ ಬಂದಿತು. ಆಗ ಯುವಕರು ಪಟಾಕಿ ಡಂ ಅನಿಸಿದರು. ಇದರಿಂದ ಬೆದರಿದ ಮಂಗ ಮೊಬೈಲ್ ಅನ್ನು ಅಲ್ಲೇ ಬಿಟ್ಟು ಬಾಳೆಹಣ್ಣು ತೆಗೆದುಕೊಂಡು ಓಡಿ ಹೋಗಿದೆ. ಮೊಬೈಲ್ ಮಾಲೀಕರ ಕೈ ಸೇರಿತು. ಜನತೆಗೆ ಪುಕ್ಕಟೆ ಮನರಂಜನೆ ಸಿಕ್ಕಿದಂತಾಯಿತು.

ಇದನ್ನು ಓದಿ : ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿತ. ಈ ವರ್ಷದಂಚಿಗೆ ಜನಸಂಖ್ಯೆ 140 ಕುಸಿತ ಸಾಧ್ಯತೆ.

ಮೂರು ದಿನ ರೆಡ್ ಅಲರ್ಟ್: ಎಚ್ಚರವಹಿಸುವಂತೆ  ಜಿಲ್ಲಾಧಿಕಾರಿ ಸೂಚನೆ.