ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ (Uttarakannada) ಜಿಲ್ಲಾ ಮೀನು ಮಾರಾಟ  ಫೆಡರೇಶನ್(Fisharies Sale Federation) ಆಶ್ರಯದಲ್ಲಿ ಎಸ್ಎಸ್ಎಲ್ಸಿ  ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೀನುಗಾರ ಮಕ್ಕಳಿಗೆ(Fisherman Chldrens) ಪ್ರತಿಭಾ ಪುರಸ್ಕಾರ(Pratibha Puraskara) ಮತ್ತು ಮತ್ಸ್ಯ ಮಹಿಳಾ(Matsya Women) ಸ್ವಾವಲಂಬನಾ ಯೋಜನೆಯಡಿ ಮೀನುಗಾರ ಮಹಿಳೆಯರಿಗೆ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಇಲ್ಲಿನ ಸಾಗರ ದರ್ಶನ ಸಭಾಭವನದಲ್ಲಿ(Sagaradarshan Hall) ಜರುಗಿದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ(MLC Ganapati Ulvekar) ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 1957ರಲ್ಲಿ ಈ ಮೀನುಗಾರಿಕಾ ಫೆಡರೇಶನ್ ಸ್ಥಾಪನೆಯಾಗಿದ್ದು, ಈಗಾಗಲೇ 17 ಜನ ಈ ಫೆಡರೇಶನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮೀನುಗಾರಿಕಾ ಫೆಡರೇಶನ್ ವತಿಯಿಂದ ಇಂದು ಮೀನುಗಾರ ಮಹಿಳೆಯರಿಗೆ(Fisher womens) ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯಡಿ  1 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದು,  ಈ ಹಣದಲ್ಲಿ ಮೀನುಗಾರ ಮಹಿಳೆಯರು ಮೀನು ವ್ಯಾಪಾರ ನಡೆಸಿ, ತಮ್ಮ ಜೀವನ ಕಟ್ಟಿಕೊಳ್ಳಬೇಕು. ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಡಿ ಮೀನುಗಾರ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಸಾಲದ ಪ್ರಮಾಣವನ್ನು ಹೆಚ್ಚಿಸಿ ಇನ್ನಷ್ಟು ಸೌಲಭ್ಯ ದೊರಕಿಸಿಕೊಡ ಬೇಕು  ಎಂದು  ಸರಕಾರದಲ್ಲಿ ಮನವಿ ಮಾಡಲಾಗುವುದು ಎಂದರು.

ಎಸ್ಎಸ್ಎಲ್ ಸಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲೆಯ ಸುಮಾರು 82  ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅದೇ ರೀತಿ ಮಹಿಳಾ ಸ್ವಹಾಯ ಸಂಘದ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿದರು.

ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್  ಅಧ್ಯಕ್ಷ ವೆಂಕಟೇಶ ಈರಾ ತಾಂಡೇಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರವು ಫೆಡರೇಶನ್ ಇತಿಹಾಸದಲ್ಲೆ ಪ್ರಥಮ ಬಾರಿಗೆ ಮೀನುಗಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದ ಮೂಲಕ  ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
2024-25 ನೇ ಪ್ರಸಕ್ತ ಸಾಲಿನ 37 ಲಕ್ಷ ರೂಪಯಿ ಲಾಭವನ್ನು ಫೆಡರೇಷನ್ ಸಂಸ್ಥೆ ಮಾಡಿದೆ, 2020-21 ನೇ ಸಾಲಿನಲ್ಲಿ  ಅಗಿರುವ ಅವ್ಯವಹಾರದ ಮೊತ್ತ ರೂಪಾಯಿ 19 ಲಕ್ಷವನ್ನು ಕಲಂ 68 ರಡಿ ನಿರ್ದೇಶನದ ಮೇಲೆ ಅನುವು ಮಾಡಿ 2024-25 ನೇ ವರ್ಷದಲ್ಲಿ ರೂಪಾಯಿ 18.54 ಲಕ್ಷ ಲಾಭ ಬಂದಿರುತ್ತದೆ ಎಂದರು.

ನಮ್ಮ ಆಡಳಿತದ 5 ವರ್ಷದಲ್ಲಿ 1 ಕೋಟಿ 69 ಲಕ್ಷ ಲಾಭವಾಗಿರುತ್ತದೆ. ಅದರಲ್ಲಿ ತದಡಿ ಮಾರ್ಕೇಟಿಂಗ್‌ನಿಂದ ರೂಪಾಯಿ 1 ಕೋಟಿ 20 ಲಕ್ಷ. ಮಂಜುಗಡ್ಡೆ ಸ್ಥಾವರದಿಂದ ರೂಪಾಯಿ 17 ಲಕ್ಷ 68 ಸಾವಿರ ಲಾಭ ಹಾಗೂ ಡಿಸೆಲ್ ಟ್ಯಾಂಕರಗಳಿಂದ ರೂಪಾಯಿ 10 ಲಕ್ಷ 84 ಸಾವಿರ ಲಾಭ ಬಂದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

 ಎಲ್ಲಾ ಡಿಸೇಲ್ ಬಂಕ್ ಶಾಖೆಗಳಿಂದ ರೂಪಾಯಿ 1 ಕೋಟಿ 15 ಲಕ್ಷ ವ್ಯಾಪಾರಿ ಲಾಭ ಆಗಿದೆ. ಅಮದಳ್ಳಿ ಮಂಜುಗಡ್ಡೆ ಸ್ಥಾವರದ ನವೀಕರಣ ಕಾಮಗಾರಿಗೆ ತಗುಲಿದ ವೆಚ್ಚ 1 ಕೊಟಿ 30 ಲಕ್ಷ ಖರ್ಚು ಆಗಿದೆ, ಮುದಗಾ ಮಂಜುಗಡ್ಡೆ ಸ್ಥಾವರದ(Mudga Ice Plant) ದುರಸ್ತಿಗೆ ಆದಂತಹ ಖರ್ಚು 45 ಲಕ್ಷ ಎಂದು ತಿಳಿಸಿದರು.

 ಮೀನುಗಾರರ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು, ಸರಕಾರದಿಂದ ಮತ್ಸ್ಯ ಮಹಿಳಾ ಯೋಜನೆಯಡಿ 2 ಕೋಟಿ ಹಾಗೂ ಪಾಲು ಬಂಡವಾಳ ಯೋಜನೆಯಡಿ 1.50 ಕೋಟಿ ಮೊತ್ತವನ್ನು ನೀಡಬೆಕೆಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

20 ಕೆ ಎಲ್ ಹೊಸ ಡಿಸೇಲ್ ಟ್ಯಾಂಕರ ಖರೀದಿ ಮಾಡುವುದು, ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡುವುದು ಮತ್ತು ಫೆಡರೇಶನ್‌ಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಗುರಿಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ನಿರ್ದೆಶಕರಾದ  ವಿಠ್ಠಲ್ ಶನಿಯಾರ್ ದೈಮನೆ ಮಾತನಾಡಿ, ಫೆಡರೇಶನ್ ಇತಿಹಾಸದ ಬಗ್ಗೆ ಉಲ್ಲೇಖಿಸಿ, ಸಹಕಾರಿ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ 1957ರಲ್ಲಿ ಈ ಸಂಸ್ಥೆ ಸ್ಥಾಪನೆ ಆಯಿತು. ಈ ಸಂಸ್ಥೆಯ ಸ್ಥಾಪನೆ ಆದಾಗಿನಿಂದ ಸತತವಾಗಿ ಮೀನುಗಾರರ ಅಭಿವೃದ್ಧಿಗೆ ದುಡಿಯುತ್ತ ಬಂದಿದ್ದು 65ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ತನ್ನ ವಹಿವಾಟು ಮತ್ತು ವ್ಯವಹಾರವನ್ನು ವೃದ್ಧಿಸಿಕೊಂಡಿದೆ ಎಂದರು.


ಸದಸ್ಯತ್ವ ಮತ್ತು ಪಾಲು ಬಂಡವಾಳ ಸಟ್ಲೆ ವ್ಯವಹಾರ , ಯಾಂತೀಕೃತ ಬೋಟ್‌ಗಳಿಗೆ ಸಂರಕ್ಷಣೆ ಸಾಲ, ಮೀನುಗಾರರ ಸಲಕರಣೆ ಮತ್ತು ಬಿಡಿಬಾಗ ಮಾರಾಟ ವರ್ಕ್ಶಾಪ್ ವಿಭಾಗ ಮಂಜುಗಡ್ಡೆ ಸ್ಥಾವರ ಅಮದಳ್ಳಿ ಮತ್ತು ಮುದುಗಾ,, ಕೇಂದ್ರ ಪುರಸ್ಕೃತ ಯೋಜನೆ ಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆ, ಪಾಲು ಬಂಡವಾಳ ಯೋಜನೆಯನ್ನು ಸಬ್ಸಿಡಿ ದರದಲ್ಲಿ ಡಿಸೇಲ್ ಪೂರೈಕೆಯನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ನಿರ್ದೇಶಕರಾದ ದಿವಾಕರ ಮೋಗೇರ ಮಾತನಾಡಿ, ಫೆಡರೇಶನ್ ಅಧ್ಯಕ್ಷರಾಗಿದ್ದ ದಿ. ರಾಜು ತಾಂಡೇಲ್ ಅವರ ಆಶಯದಂತೆ ಎಸ್‌ಎಸ್ ಎಲ್‌ಸಿಯಲ್ಲಿ ಶೇಕಡ 90 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಫೆಡರೇಶನ ನಿರ್ದೇಶಕರಾದ  ವಿಠ್ಠಲ ದೈಮನೆ, ಶ್ರೀಧರ ಹರಿಕಂತ್ರ, ಸುಧಾಕರ ಹರಿಕಂತ್ರ,  ರಾಜು ಹರಿಕಂತ್ರ, ದಿವಾಕರ ದಾಸಿ ಮೊಗೇರ, ದಿಲೀಪ್ ಚಂಡೆಕರ, ಸುಧಾಕರ ಹರಿಕಂತ್ರ, ಪ್ರಶಾಂತ ತಾಂಡೇಲ, ಮಹೇಶ ಮೂಡಂಗಿ, ಆಶಾ ಶ್ರೀಧರ ಹರಿಕಂತ್ರ, ಸವಿತಾ ಗಾಂವಕರ, ಬೀರಪ್ಪ ಹರಿಕಂತ್ರ, ಜನರಲ್ ಮ್ಯಾನೇಜರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜನರಲ್ ಮ್ಯಾನೇಜರ್ ಗಣೇಶ ಆರ್ ವಂದಿಸಿದರೇ, ವನಿತಾ ಕಾರ್ಯಕ್ರಮ ನಿರೂಪಿಸಿದರು.   ಕಾರ್ಯಕ್ರಮದಲ್ಲಿ  ಸಿಬ್ಬಂದಿ ವರ್ಗದವರು ಹಾಗೂ ಮೀನುಗಾರ ಮಹಿಳೆಯರು, ಮುಖಂಡರು, ವಿವಿಧ ಸಂಘ ಸಂಸ್ಥೆಗಳಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಓದಿ : ರಫೆಲ್ ಯುದ್ದ ವಿಮಾನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು.

ಎಮ್ಮೆ ಅಡ್ಡ ಬಂದು ಎಂಬಿಬಿಎಸ್ ವಿದ್ಯಾರ್ಥಿ ದುರ್ಮರಣ. ಇನ್ನೋರ್ವ ಗಂಭೀರ.

ಬರೋಬ್ಬರಿ‌ 240 ಕೋಟಿ‌ ರೂ ಲಾಟರಿ‌ ಗೆದ್ದ ಯುವಕ. ಅದೃಷ್ಟಳಾದ ತಾಯಿ‌!

ಅಂಕೋಲಾದ ಸರಕಾರಿ ಕಾಲೇಜಿನಲ್ಲಿ ಚಪಲ ಚೆನ್ನಿಗರಾಯ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಪೋಷಕರ, ವಿದ್ಯಾರ್ಥಿಗಳ ಪ್ರತಿಭಟನೆ