ಭಟ್ಕಳ : ಪಟ್ಟಣದ ರಾಷ್ಟೀಯ ಹೆದ್ದಾರಿ ಈಗ ಅವ್ಯವಸ್ಥೆಯ ತಾಣವಾಗಿದೆ. ಪ್ರತಿದಿನ ರಾಶಿರಾಶಿ ತ್ಯಾಜ್ಯಗಳು ಬಂದು ಬೀಳುತ್ತಿವೆ. ಇಷ್ಟಾದರೂ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಎಂಬುದಕ್ಕೆ ಈ ದೃಶ್ಯ ಉದಾಹರಣೆ.

ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಅಧಿಕಾರಿಗಳು ಪರಿಸರ ದಿನಾಚರಣೆಯಲ್ಲಿ ಭಾಷಣ ಮಾಡುತ್ತಾರೆ. ಆದರೆ ತಮ್ಮ ಕಣ್ಣೆದುರಿಗೆ ಈ ರೀತಿಯಾಗಿ ತ್ಯಾಜ್ಯದ ರಾಶಿ ಬೀಳುವುದು ಕಣ್ಣಿಗೆ ಕಾಣುವುದಿಲ್ಲ. ಭಟ್ಕಳ ಹೆದ್ದಾರಿಯಲ್ಲಿ ಓಡಾಡುವ ಆಸುಪಾಸಿನಲ್ಲಿ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೆ ರೀತಿಯಾಗಿ ಕಸ ಬೀಳುತಿತ್ತು. ಆದರೆ ಹೆಬಳೆ ಪಂಚಾಯತ್ ನಿಂದ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೀಗಾಗಿ ಕಸವೆಲ್ಲ ರಾಷ್ಟೀಯ ಹೆದ್ದಾರಿಗೆ ಶಿಫ್ಟ್ ಆಗಿದೆ.

ಕಸದ ವಿಲೇವಾರಿ ಸರಿಯಾಗಿ ಆಗದ ಕಾರಣದಿಂದ ಇಲ್ಲಿ ಗಲೀಜು ವಾತಾವರಣ ನಿರ್ಮಾಣವಾಗಿದೆ.  ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಈಗಾಗಲೇ ಮನೆಮನೆಗೆ ಬೆಳಿಗ್ಗೆ ಕಸದ ವ್ಯಾನ್  ಹೋಗುತ್ತಿದೆ. ಆದರೆ ವಾಹನಕ್ಕೆ ಕಸ ನೀಡುತ್ತಿಲ್ಲವೇ ಎಂಬ ಅನುಮಾನ ಉಂಟಾಗಿದೆ.

ಇವೆಲ್ಲವೂ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಬೀಳುವ ಕಸವಾಗಿದೆ. ಆದರೆ ಅಲ್ಲಿ ಕಸದ ವ್ಯಾನ್ ಹೋಗದೇ ಇರುವುದರಿಂದ ಈ ರೀತಿಯಾಗಿ ಜನರು ತಂದು ಇಲ್ಲಿ ಬಿಸಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಕಳೆದೊಂದು ವಾರದಿಂದ ಇಲ್ಲಿ ಕಸ ಬಿಸಾಡುತ್ತಿದ್ದರೂ ಭಟ್ಕಳದವರು ಸುಮ್ಮನೆ ಇದ್ದಿದ್ಯಾಕೆ ಎಂಬ ಪ್ರಶ್ನೆಗೆ ಕಾಡುತ್ತಿದೆ. ಅಧಿಕಾರಿಗಳು ಈ ಹೆದ್ದಾರಿಯಲ್ಲಿ ಓಡಾಡುತ್ತಿಲ್ಲವೇ. ಕಣ್ಣಿಗೆ ಕಂಡರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಅನುಮಾನ ಜನರನ್ನ ಕಾಣುತ್ತಿದೆ. ಭಟ್ಕಳದ ಹೃದಯ ಭಾಗದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಪಂಚಾಯತ್, ಅರಣ್ಯ ಇಲಾಖೆ, ಪುರಸಭೆ ಹೀಗೆ ಹತ್ತಾರು ಕಚೇರಿಗಳಿವೆ. ಆದರೆ ಯಾರು ಕಣ್ಣೆತ್ತಿ ನೋಡುತ್ತಿಲ್ಲ

ಹೆದ್ದಾರಿ ಪಕ್ಕದಲ್ಲಿ ಬೀಳುತ್ತಿರುವ ಕಸದ ರಾಶಿ ಕಂಡು ಪ್ರಜ್ಞಾವಂತರು ಬೇಸರಿಸಿಕೊಳ್ಳುತ್ತಿದ್ದಾರೆ. ಓರ್ವ ವೈದ್ಯರೊಬ್ಬರೂ ವಿಡಿಯೋ ಮಾಡಿ ಆಕ್ರೋಶ ಹೊರಗಡೆ ಹಾಕಿದ್ದಾರೆ. ಕಸ ಎಸೆಯುವವರಿಗೆ ದೇವರು ಕೂಡ ಕ್ಷಮಿಸಲ್ಲ ಎಂದಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕಸದ ವಿಲೇವಾರಿ ಮಾಡಿ ಮತ್ತೆ ಕಸ ಬೀಳದ ಹಾಗೆ ನೋಡಿಕೊಳ್ಳುತ್ತಾ ಕಾದು ನೋಡಬೇಕು.