ಜೋಯಿಡಾ : ತಾಲೂಕಿನ ಅವುರ್ಲಿ ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಅಗ್ರಹಿಸಿ ಬಿಇಓ ಕಚೇರಿ ಎದುರು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ನಡೆಸಿದ್ದಾರೆ.
ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಅವುರ್ಲಿ ಶಾಲೆಯಲ್ಲಿ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಂದಿಸದ ಕಾರಣದಿಂದ ಪಾಲಕರು, ಪೋಷಕರು, ಮಕ್ಕಳು ಊರ ನಾಗರೀಕರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು ತಮಗೆ ನ್ಯಾಯ ಒದಗಿಸಲು ಘೋಷಣೆ ಕೂಗಿದರು.
ಅವುರ್ಲಿ ಶಾಲೆಯಲ್ಲಿ 4 ಹುದ್ದೆಗಳು ಮಂಜೂರಾತಿ ಇದ್ದು ಕಳೆದ ಒಂದು ವರ್ಷಗಳಿಂದ ಖಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರು ಶಾಲಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಶಾಸಕರು ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಕರ ಪೋಷಕರ ಮಕ್ಕಳ ಊರ ನಾಗರೀಕರ ಒತ್ತಾಯಿಸುತ್ತಿದ್ದಾರೆ