ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ರಫೇಲ್ ಯುದ್ಧ ವಿಮಾನದಲ್ಲಿ(Rafale Fighter Plane) ಹಾರಾಟ ನಡೆಸುವ ಮೂಲಕ ಮೊದಲ ರಾಷ್ಟ್ರಪತಿ(President Of India) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂದು ಹರಿಯಾಣದ(Haryan) ಅಂಬಾಲಾ ವಾಯುಪಡೆ(Ambala Airbase) ನೆಲೆಯಿಂದ ಅವರು ರಫೆಲ್ ಯುದ್ದ ವಿಮಾನ ಏರಿದರು. ಕೆಲ ತಿಂಗಳ ಹಿಂದೆ, ಪಹಲ್ಗಾಮ್ ದಾಳಿಯ(Phelgaum Attack) ಸಂದರ್ಭದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ(Operation Sinduru) ನಡೆಸಿತ್ತು. ಇದೇ ವಾಯುನೆಲೆಯಿಂದ ರಫೇಲ್‌ಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು(Terrorist Camp) ನಾಶಮಾಡುವ ಕಾರ್ಯಾಚರಣೆ ನಡೆಸಿದ್ದವು. ಆ ಮೂಲಕ ಭಾರತವು ಭಯೋತ್ಪಾದನಾ ವಿರೋಧಿ ಸಂದೇಶವನ್ನ ಜಗತ್ತಿಗೆ ರವಾನಿಸಿತ್ತು.
ರಾಷ್ಟ್ರಪತಿ ಅವರು ಯುದ್ಧ ವಿಮಾನದಲ್ಲಿ(Fighter Plane) ನಡೆಸುತ್ತಿರುವ ಎರಡನೇ ಹಾರಾಟ ಇದು. 2023ರ ಏಪ್ರಿಲ್ 8 ರಂದು ಅಸ್ಸಾಂನ ತೇಜ್‌ಪುರ(Assam Tejpur) ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್‌ನಲ್ಲಿ(Sukoi 30 k Jet) ಮುರ್ಮು ಹಾರಾಟ ನಡೆಸಿದ್ದರು. ಹೀಗೆ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು.
ಮುರ್ಮು ಅವರಿಗಿಂತ ಮೊದಲು, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ(APJ Abdul Kalam) ಮತ್ತು ಪ್ರತಿಭಾ ಪಾಟೀಲ್(Pratibha Patil) ಅವರು ಪುಣೆ(Pune) ಬಳಿಯ ಲೋಹೆಗಾಂವ್‌ನಲ್ಲಿ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು. ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್‌ನಲ್ಲಿ ಭಾರತದ ರಾಷ್ಟ್ರಪತಿಯೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲಾಗಿದೆ.
ಇದನ್ನು ಓದಿ : ಎಮ್ಮೆ ಅಡ್ಡ ಬಂದು ಎಂಬಿಬಿಎಸ್ ವಿದ್ಯಾರ್ಥಿ ದುರ್ಮರಣ. ಇನ್ನೋರ್ವ ಗಂಭೀರ.
ಬರೋಬ್ಬರಿ 240 ಕೋಟಿ ರೂ ಲಾಟರಿ ಗೆದ್ದ ಯುವಕ. ಅದೃಷ್ಟಳಾದ ತಾಯಿ!
ಕಾರವಾರ ರಾ. ಹೆದ್ದಾರಿಯಲ್ಲಿ ಎರಡು ಅಪಘಾತ. ಬೈಕ್ ಸವಾರರಿಗೆ ಗಾಯ.

