ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ನಷ್ಟದ ಸುಳಿಯಲ್ಲಿ ಸಿಲುಕಿದ ಕಾರವಾರದ ಪ್ರತಿಷ್ಥಿತ ‘ದಿ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್’ಗೆ(Karwar Urban Co Operative Bank) ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರದ್ದುಪಡಿಸಿದೆ. ಹೀಗಾಗಿ ಗ್ರಾಹಕರು ಶಾಕ್ ಗೆ ಒಳಗಾಗುವಂತಾಗಿದೆ.
ಕಾರವಾರ ಅರ್ಬನ್ ಬ್ಯಾಂಕ್ನ ಬಳಿ ಅಗತ್ಯ ಬಂಡವಾಳ ಇಲ್ಲ, ಬ್ಯಾಂಕ್ನ ಗಳಿಕೆಯ ಸಾಧ್ಯತೆಯೂ ಚೆನ್ನಾಗಿಲ್ಲ ಎಂದು ಆರ್ಬಿಐ(RBI) ತಿಳಿಸಿದೆ. ಪರವಾನಗಿ ರದ್ದಾಗಿರುವುದರಿಂದ ಬ್ಯಾಂಕ್ನ ಕಾರ್ಯಗಳು ಬುಧವಾರದಿಂದಲೇ ಸ್ಥಗಿತಗೊಂಡಿದೆ.
ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್ಗೆ ಆರ್ಬಿಐ ಮನವಿ ಮಾಡಿ ಈ ಬ್ಯಾಂಕ್ನ್ನು ಮುಚ್ಚುವ ಆದೇಶ ಹೊರಡಿಸುವಂತೆ ಸೂಚಿಸಿದೆ. ಬ್ಯಾಂಕನ್ನು ಮುಚ್ಚುವ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು ಅಧಿಕಾರಿಯನ್ನು (ಲಿಕ್ವಿಡೇಟರ್) ನೇಮಕ ಮಾಡುವಂತೆ ಆರ್ ಬಿ ಐ ತಿಳಿಸಿದೆ.
ಬ್ಯಾಂಕ್ ಮುಚ್ಚುವ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ ಠೇವಣಿದಾರರಿಗೆ ₹5 ಲಕ್ಷದವರೆಗೆ ಠೇವಣಿ ವಿಮೆ ಸಿಗಲಿದೆ. ಬ್ಯಾಂಕ್ನ ಠೇವಣಿದಾರರ ಪೈಕಿ ಶೇ 92.9ರಷ್ಟು ಮಂದಿ ತಮ್ಮ ಠೇವಣಿಯ ಪೂರ್ಣ ಮೊತ್ತವನ್ನು ವಿಮಾ ಪರಿಹಾರದ ರೂಪದಲ್ಲಿ ಪಡೆಯಲು ಅರ್ಹರಿದ್ದಾರೆ ಎಂದು ಆರ್ಬಿಐ ಹೇಳಿದೆ.
ಜೂನ್ 30ರವರೆಗಿನ ಮಾಹಿತಿ ಪ್ರಕಾರ, ವಿಮಾ ವ್ಯಾಪ್ತಿಯಲ್ಲಿ ಇರುವ ಠೇವಣಿಗಳ ಪೈಕಿ ₹37.79 ಕೋಟಿಯಷ್ಟು ಹಣವನ್ನು ಪಾವತಿ ಮಾಡಲಾಗಿದೆ. ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರವಾರ ಅರ್ಬನ್ ಬ್ಯಾಂಕ್ ಕಾರ್ಯಾಚರಣೆಗಳು ನಡೆಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಇದನ್ನು ಓದಿ : ಭಟ್ಕಳ ಮಾರಿಜಾತ್ರೆಗೆ ಚಾಲನೆ. ಮಧ್ಯಾಹ್ನ ಅದ್ದೂರಿ ಮೆರವಣಿಗೆ.
ಮದುವೆಯಾದ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ. ನ್ಯಾಯಮೂರ್ತಿಗಳೆ ಶಾಕ್.
ಧರ್ಮಸ್ಥಳ ಪ್ರಕರಣದ ತನಿಖೆಗೆ ಉತ್ತರಕನ್ನಡ ಜಿಲ್ಲೆಯ ಸೇರಿ 20 ಖಡಕ್ ಅಧಿಕಾರಿಗಳು.
	
						
							
			
			
			
			
