ಕಾರವಾರ(KARWAR) : ಹವಮಾನ ವೈಪರಿತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ(OCEAN SEA) ಮೀನುಗಾರಿಕೆ ನಡೆಸುವ ಮೀನುಗಾರರು ಬಂದರಿಗೆ ಆಗಮಿಸಿ ರಕ್ಷಣೆ ಪಡೆದಿದ್ದಾರೆ.
ಕಳೆದ ಕೆಲ ತಾಸುಗಳಿಂದ ಆಳ ಸಮುದ್ರದಲ್ಲಿ ವಿಪರೀತವಾಗಿ ಗಾಳಿ ಬೀಸುತ್ತಿದೆ. ಹೀಗಾಗಿ ಬಾರೀ ಪ್ರಮಾಣದ ಅಲೆಗಳು ಏಳುತ್ತಿದ್ದು, ಯಾಂತ್ರಿಕ ದೋಣಿಗಳನ್ನ ಓಡಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ವಿವಿಧ ಜಿಲ್ಲೆಗಳ, ರಾಜ್ಯಗಳ ಮೀನುಗಾರರು ರಕ್ಷಣೆಗಾಗಿ ಕಾರವಾರ ಬಂದರಿಗೆ ದೌಡಾಯಿಸಿವೆ. ಒಂದು ಅಂದಾಜಿಗೆ 40 ರಿಂದ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿವೆ. ಹೀಗಾಗಿ ಮೀನುಗಾರರು ಬಂದರಿನತ್ತ ಧಾವಿಸಿದ್ದಾರೆ.
ಅಗಸ್ಟ್ ಒಂದರಿಂದ ಕರಾವಳಿಯಲ್ಲಿ ಮೀನುಗಾರಿಕೆ (COASTAL FISHING) ಆರಂಭವಾಗಿತ್ತು. ಆಳ ಸಮುದ್ರ ಮೀನುಗಾರಿಕೆ ನಡೆಸುವ ಮಂಗಳೂರು(MANGALORE), ಮಲ್ಪೆ (MALPE) ಭಾಗದ ಯಾಂತ್ರಿಕ ದೋಣಿಗಳು ಮೀನು ಬೇಟೆ ಆರಂಭಿಸಿದ್ದವು. ಆದ್ರೆ ಮೀನಿನ ಸಂಪಾದನೆ ಕೂಡ ಸರಿಯಾಗಿ ಆಗಿರಲಿಲ್ಲ. ಪ್ರತಿ ವರ್ಷ ಮೀನುಗಾರಿಕೆ ಆರಂಭದ ಅವಧಿಯಲ್ಲಿ ಬಹುತೇಕ ಯಾಂತ್ರಿಕ ದೋಣಿಯ ಮೀನುಗಾರರು ಉತ್ತಮವಾಗಿ ಮೀನು ಹಿಡಿಯುತ್ತಿದ್ದರು. ಆದ್ರೆ ಈ ಬಾರೀ ಹವಮಾನ ಕಡಲಮಕ್ಕಳಿಗೆ ಕೈ ಕೊಟ್ಟಿದೆ. ಹವಾಮಾನ ವೈಫರಿತ್ಯದ ಜೊತೆಗೆ ಮೀನು ಸಿಗದೇ ಇರುವುದರಿಂದ ಬೋಟಿನಲ್ಲಿ ಕೆಲಸ ಮಾಡುವ ಕಲಾಶಿಗಳು ಸಹ ಸಂಪಾದನೆ ಇಲ್ಲದೇ ಕಂಗಾಲಾಗಿದ್ದಾರೆ.
ಕಾರವಾರ ಬಂದರು, ತೆಂಗಿನಗುಂಡಿ, ತದಡಿ, ಹೊನ್ನಾವರ ಸೇರಿದಂತೆ ಇತರ ಕಡೆಗಳಲ್ಲಿ ನೂರಾರು ಸಂಖ್ಯೆಯ ಬೋಟುಗಳು ಲಂಗರು ಹಾಕಿವೆ. ಇನ್ನೂ ಹವಮಾನ ಸಹಜ ಸ್ಥಿತಿಗೆ ಬಂದ ಮೇಲೆ ವಾಪಾಸ್ ಹೋಗೋದಾಗಿ ಮೀನುಗಾರ ಮೋಹನ್ ಹಾವಳಿಮನೆ, ದಾಮೋದರ್ ತಿಳಿಸಿದ್ದಾರೆ.
ಅವೈಜ್ನಾನಿಕ ಮೀನುಗಾರಿಕೆಯ ಕಾರಣವೊ ಏನೋ ಗೊತ್ತಿಲ್ಲ. ಸಮುದ್ರದಲ್ಲಿ ಮೀನಿನ ನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮೀನು ಸಹ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆ ಆದರೆ ಮುಂದೆ ಕಡಲನ್ನ ನಂಬಿದವರ ಬದುಕು ದುಸ್ತರವಾಗಲಿದೆ.
ಇದನ್ನು ಓದಿ : ಶಿರೂರು ದುರಂತ ಮೋದಿ ಪತ್ರ