ಬೈಂದೂರು : ಕರಾವಳಿ ಭಾಗದಲ್ಲಿ ಬೀಸಿದ ಬಾರೀ ಸುಳಿಗಾಳಿಗೆ ಹೋಟೆಲ್ ಹಾಗೂ ಕುಶನ್ ಅಂಗಡಿಯ ಮೇಲ್ಛಾವಣಿ ಹಾರಿ ಹೋದ ಘಟನೆ ನಡೆದಿದೆ.

ಗಡಿ ಭಾಗದ ಶಿರೂರಿನ ಬಪ್ಪನಬೈಲುವಿನ ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲಿ ಹಲವು ಅಂಗಡಿಗಳ ಮೇಲಚಾವಣಿ ಹಾರಿ  ಬಿದ್ದಿದೆ. ಇಲ್ಲಿನ ಸಹರಾ ಹೋಟೆಲಿನ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಳಿ ಬೀಸುವ ಸಂದರ್ಭದಲ್ಲಿ  ಹೊಟೇಲ್ನಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ.

ಹೋಟೆಲ್ ಸಮೀಪವಿದ್ದ ಸನ್ ಶೈನ್ ಕುಶನ್ ಅಂಗಡಿ ಮೇಲ್ಛಾವಣಿ ಕೂಡ ಹಾರಿ ಹೋಗಿ ಅಪಾರ ಹಾನಿಯಾಗಿದೆ. ಘಟನೆಯಲ್ಲಿ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿದ್ದು ಆತಂಕ ಸೃಷ್ಟಿ ಮಾಡಿದೆ.