ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ತೀರ್ಥಯಾತ್ರೆಗೆ ಹೋಗಿ ವಾಪಾಸ್ಸಾಗುತ್ತಿದ್ದ ಕುಮಟಾದ  ವಾಹನವೊಂದರ ಮೇಲೆ ಜಿಗಿದು ದರೋಡೆಗೆ(Robbery) ಯತ್ನಿಸಿದ ಘಟನೆ ನಡೆದಿದೆ.

ಉತ್ತರಕನ್ನಡ(Uttarakannada) ಜಿಲ್ಲೆಯ ಕುಮಟಾ ತಾಲೂಕಿನ(Kumta) ಕತಗಾಲ ಮಾಸ್ತಿಹಳ್ಳ ಮೂಲದ ಕುಟುಂಬವೊಂದು ಸ್ಥಳೀಯ ಗಜಾನನ ಟ್ರಾವೆಲ್ಸ್‌ನ ಟಿಟಿ ವಾಹನದಲ್ಲಿ ಶಿರಡಿ(Shirdi) ಹಾಗೂ ಅಯೋಧ್ಯ  ಪ್ರವಾಸ(Ayodhya Tour) ಮುಗಿಸಿ ಊರಿಗೆ ಮರಳುತ್ತಿದ್ದಾಗ, ಶುಕ್ರವಾರ ರಾತ್ರಿ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52(Maharashtra NH 52) ಸೊಲ್ಲಾಪುರ(Sollapur) ಬಳಿ  ದರೋಡೆಕೋರರು(Robbery) ವಾಹನವನ್ನ ಹಿಂಬಾಲಿಸಿದ್ದರು.  ಮೂರು ಬೈಕ್‌ಗಳ ಮೂಲಕ  ಹಿಂಬಾಲಿಸಿದ ದುಷ್ಕರ್ಮಿಗಳು, ಚಲಿಸುತ್ತಿದ್ದ ವಾಹನದ ಹಿಂದಿನ ಬಾಗಿಲಿಗೆ ಜಿಗಿದು ಒಳನುಗ್ಗಿದ್ದಾರೆ. ಬಳಿಕ ಹಿಂಬದಿಯಲ್ಲಿದ್ದ ಬ್ಯಾಗ್‌ಗಳನ್ನು ಎಳೆದು ಹೊರಗೆಸೆದಿದ್ದಾರೆ.

ಚಾಲಕ ದರೋಡೆಕೋರರನ್ನ ಗಮನಿಸಿದ್ದ.  ಹೀಗಾಗಿ ಚಾಲಕ ಗಣಪತಿ ನಾಯ್ಕ ತಕ್ಷಣವೇ ವಾಹನ ನಿಲ್ಲಿಸಿದಾಗ ಗ್ಯಾಂಗ್  ಇಡೀ ವಾಹನವನ್ನೇ ಸುತ್ತುವರಿದು ದಾಳಿ ಮಾಡಲು ಯತ್ನಿಸಿದೆ ಎನ್ನಲಾಗಿದೆ. ಚಾಲಕ  ವಾಹನದಲ್ಲಿ ಅಡುಗೆಗೆ ಇಟ್ಟಿದ್ದ ಆಯುಧವನ್ನು ಕೈಯಲ್ಲಿ ಹಿಡಿದು ಅವರನ್ನು ಎದುರಿಸಿದ್ದಾರೆ. ಹೀಗಾಗಿ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ದರೋಡೆಕೋರರು(Robberist)  ದೋಚಿದ ಬ್ಯಾಗ್‌ಗಳಲ್ಲಿ ಬಟ್ಟೆಗಳು ಮಾತ್ರವೇ ಇದ್ದವು. ಆದರೆ ನಗದು ಅಥವಾ ಚಿನ್ನಾಭರಣ ಇರಲಿಲ್ಲ. ಘಟನೆಯಿಂದ ಕುಟುಂಬದವರು ಆತಂಕಗೊಂಡಿದ್ದಾರೆ. ಇದೇ ರೀತಿ ಕರ್ನಾಟಕದ ವಿವಿಧ ‌ಜಿಲ್ಲೆಗಳ  ಪ್ರವಾಸಿಗರಿಗೂ ಇದೇ ರೀತಿ ದರೋಡೆಯ ಅನುಭವವಾಗುತ್ತಿದೆ. ಹೀಗಾಗಿ ವಾಹನ ಸವಾರರು  ರಾತ್ರಿ ಪ್ರಯಾಣ ಮಾಡದೇ ಹಗಲಿನ ವೇಳೆಯಲ್ಲಿ ಪ್ರಯಾಣಿಸೋದು ಸೂಕ್ತ. ಅಪರಿಚಿತ ಸ್ಥಳಗಳು, ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸದೇ ಇರುವುದು ಒಳ್ಳೆಯದು. ಜೊತೆಗೆ ಸುರಕ್ಷತಾ ದೃಷ್ಟಿಯಿಂದ  ತಾವು ಪ್ರಯಾಣಿಸುವ ವಾಹನಗಳ ಡೋರ್, ವಿಂಡೋ  ಲಾಕ್ ಮಾಡುವುದನ್ನ ಮರೆಯಬೇಡಿ.

ಇದನ್ನು ಓದಿ : ಕುಮಟಾದಲ್ಲಿ ಕಳ್ಳತನ ಮಾಡಿದ ಭಟ್ಕಳದ ಆರೋಪಿತ ಪೊಲೀಸರ ಕೈಯಿಂದ ಎಸ್ಕೇಪ್.

ಹಾಡಹಗಲೇ ವೃದ್ಧೆಯ ಗಮನ ಬೇರೆಡೆ ಸೆಳೆದು  ಬಂಗಾರದಾಭರಣ ದೋಚಿದ ಖದೀಮರು.

ಅಂಗನವಾಡಿ ಶಿಕ್ಷಕಿಯಿಂದ ಸಾಲ ಪಡೆದ. ಹಣ ವಾಪಾಸ್ ಕೇಳಿದಾಗ ಜೀವ ತೆಗೆದ.