ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹುಬ್ಬಳ್ಳಿ(Hubli) : ಹುಬ್ಬಳ್ಳಿಯಲ್ಲಿ ಆರ್‌ಟಿಐ ಕಾರ್ಯಕರ್ತರ(RTI Workers) ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಹುಬ್ಬಳ್ಳಿ–ಧಾರವಾಡ (Hubli-Dharwad) ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ನೇತೃತ್ವದ ತಂಡ ಪತ್ತೆ ಹಚ್ಚಿ ಬಂಧಿಸಿದೆ.
ಹುಬ್ಬಳ್ಳಿಯ ಸಮೃದ್ಧಿ ಕೋ-ಆಪರೇಟಿವ್ ಸೊಸೈಟಿಯಿಂದ(Samruddhi Co Operative Society) ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಹಣ ಸ್ವೀಕರಿಸುವ ವೇಳೆಯೇ ಗೋಕುಲ ರೋಡ್(Gokul Road) ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅವರ ತಂಡ ಬಲೆ ಬೀಸಿ ಹಡೆ ಮುರಿ ಕಟ್ಟಿದೆ.
ಗದಗ ಮೂಲದ(Gadag Native) ಮಂಜುನಾಥ ಹದ್ದಣ್ಣನವರ್, ಮುಂಡಗೋಡ ಮೂಲದ(Mundgod Native) ವೀರೇಶ್ ಲಿಂಗದಾಳ ಮತ್ತು ಮಹಾದೇವ ಲಿಂಗದಾಳ ಬಂಧಿತ ಆರೋಪಿಗಳು. ಇನ್ನೂ ನಾಲ್ವರು ಆರೋಪಿಗಳು ಈ ಗ್ಯಾಂಗ್‌ನ ಭಾಗವಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಜಾಲ ಬೀಸಿದ್ದಾರೆ.
ಆರೋಪಿಗಳು ವಿವಿಧ ಸಂಘಟನೆಗಳ ಹೆಸರಿನಲ್ಲಿ ಸೊಸೈಟಿಯ ಅಧಿಕಾರಿಗಳಿಗೆ ಸಂಪರ್ಕಿಸಿ, “ನಿಮ್ಮ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ, ನಮಗೆ ದೊಡ್ಡವರ ಪರಿಚಯ ಇದೆ, ಮಾಧ್ಯಮಗಳಲ್ಲಿ ಕೆಟ್ಟ ಪ್ರಚಾರ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಒಟ್ಟು 1 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಹಣದ ಒಂದು ಭಾಗವನ್ನು ಅಡ್ವಾನ್ಸ್ ಆಗಿ ಪಡೆಯುವ ವೇಳೆಯೇ ಪೊಲೀಸರು ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರೀಯಿಸಿದ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್(N Shashikumar), “ಆರೋಪಿಗಳು ಹಿಂದೆಯೂ ಇದೇ ರೀತಿಯಲ್ಲಿ ಬ್ಲಾಕ್‌ಮೇಲ್(Blackmel) ಮಾಡುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಹಿಂದೆ ಉಪನಗರ ಪೊಲೀಸ್ ಠಾಣೆಯಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಮತ್ತೆ ಸೊಸೈಟಿಯನ್ನು ಗುರಿಯಾಗಿಸಿಕೊಂಡು ಸುಲಿಗೆ ಯತ್ನ ಮಾಡಿದ್ದು, ಸ್ಪಷ್ಟ ಸಾಕ್ಷಿಗಳ ಆಧಾರದಲ್ಲಿ ಬಂಧನ ನಡೆದಿದೆ. ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಆಯುಕ್ತರು ತಿಳಿಸಿದ್ದಾರೆ.
ಒಟ್ಟಾರೆ ಪೊಲೀಸರ ಈ ಕ್ಷೀಪ್ರಕಾರ್ಯಾಚರಣೆಯಿಂದ ಹುಬ್ಬಳ್ಳಿ ನಗರದಲ್ಲಿ ಬ್ಲಾಕ್‌ಮೇಲ್ ಗ್ಯಾಂಗ್‌ಗಳ(Blackmel Gang) ವಿರುದ್ಧದ ಕಾನೂನು ಕ್ರಮಕ್ಕೆ ಹೊಸ ದಿಕ್ಕು ದೊರೆತಿದೆ.
ಇದನ್ನು ಓದಿ : ಅಪಘಾತ ರಹಿತ ಸೇವೆಗೆ ಭಟ್ಕಳದ ರಾಮಚಂದ್ರ ನಾಯ್ಕ ಅವರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಗೌರವ ಪ್ರಶಸ್ತಿ
ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

