ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgod): ತಾಲೂಕಿನ ಅಗಡಿ ಗ್ರಾಮದಲ್ಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧವನ್ನ(Sandalwood) ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾಳಿ ಸಂದರ್ಭದಲ್ಲಿ 60 ಕೆಜಿ ಶ್ರೀಗಂಧದ ತುಂಡುಗಳನ್ನು ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಪರಶುರಾಮ ಲಮಾಣಿ ಎಂಬಾತನ ಮನೆಯ ಮೇಲೆ ಅರಣ್ಯ ಅಧಿಕಾರಿಗಳು(Forest Officers) ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಖಚಿತ ಮಾಹಿತಿಯ ಆಧಾರದ ಮೇಲೆ ನಡೆಸಿದ ದಾಳಿಯಲ್ಲಿ ಶ್ರೀಗಂಧವನ್ನು ವಶಕ್ಕೆ(Sandalwood Seaz) ಪಡೆಯಲು ಅಧಿಕಾರಿಗಳಿಗೆ ಸಾಧ್ಯವಾದರೂ, ಆರೋಪಿ ಪರಾರಿಯಾಗಿದ್ದಾನೆ.

ಮನೆಯೊಳಗೆ ಗೋಣಿ ಚೀಲದಲ್ಲಿ ಬಚ್ಚಿಟ್ಟಿದ್ದ ಸುಮಾರು 60 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ದಾಳಿ ಸಮಯದಲ್ಲಿ ಪರಶುರಾಮ ಮನೆಯ ಹಿಂಭಾಗದಲ್ಲಿರುವ ಕಬ್ಬಿನ ಗದ್ದೆಯೊಳಗೆ  ಪರಾರಿಯಾಗಿದ್ದಾನೆ(Escape) ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆಯ(Forest Department) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಪರಶುರಾಮನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಅಕ್ರಮವಾಗಿ ಶ್ರೀಗಂಧ ಸಂಗ್ರಹಣೆ ಹಾಗೂ ಸಾಗಣೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.


ಇದನ್ನು ಓದಿ : ಜಾಗತಿಕ ಹವಾ ಸೃಷ್ಟಿಸಿದ ’45’ ಚಿತ್ರದ ‘AFRO ಟಪಾಂಗ್‌’ಹಾಡು. ಭಾರತದಲ್ಲಿ ಟಾಪ್ ಟ್ರೆಂಡಿಂಗ್ ! ಸದ್ಯದಲ್ಲೇ ಟ್ರೇಲರ್.

ಡಿಸೆಂಬರ್ 3 ರಂದು ಶ್ರೀಕ್ಷೇತ್ರ ಸಿದ್ದರದಲ್ಲಿ ನರಸಿಂಹ ಜಾತ್ರಾ ಮಹೋತ್ಸವ.

ಮಂಕಿ ಪಟ್ಟಣ ಪಂಚಾಯತ್ ಗೆ ಸಾರ್ವತ್ರಿಕ ಚುನಾವಣೆ