ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರ ಶಾಸಕ ಸತೀಶ ಸೈಲ್(Satish Sail) ಮನೆಯಲ್ಲಿ ಸುಮಾರು 14 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಮತ್ತು ಗುರುವಾರ ಇಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದರು. ಬುಧವಾರ ಬೆಳಿಗ್ಗೆ ಗೋವಾ(Goa) ಮತ್ತು ಬೆಂಗಳೂರಿನ(Bangalore) ಇಡಿ ಅಧಿಕಾರಿಗಳು ಸದಾಶಿವಗಡದ ಮನೆಯಲ್ಲಿ ದಾಳಿ ನಡೆಸಿದ್ದರು. ಎರಡು ದಿನಗಳ ಶೋಧ ಕಾರ್ಯಾಚರಣೆಯಲ್ಲಿ ಇಡಿ ಅಧಿಕಾರಿಗಳು ಶಾಸಕ ಸತೀಶ ಸೈಲ್ ಅವರ ಬ್ಯಾಂಕ್ ಖಾತೆಗಳಲ್ಲಿದ್ದ 14.13 ಕೋಟಿ ರೂ. ಜಪ್ತಿ ಮಾಡಿದ್ದಾರೆ.
1.68 ಕೋಟಿ ನಗದು ಮತ್ತು 6.75 ಕೆಜಿ ಚಿನ್ನಾಭರಣ ವಶ ಪಡೆದಿದ್ದು, ಇನ್ನೂ ಮಹತ್ವದ ದಾಖಲೆಗಳು, ಇ-ಮೇಲ್ ದಾಖಲೆಗಳು ವಶಕ್ಕೆ ಪಡೆಯಲಾಗಿದೆ. ಬೆಲೆಕೇರಿ(Belekeri) ಕಬ್ಬಿಣದ ಅದಿರು ಅಕ್ರಮವಾಗಿ ರಫ್ತು ಪ್ರಕರಣದಡಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.
ಸತೀಶ್ ಸೈಲ್ ಅವರು ಮಲ್ಲಿಕಾರ್ಜುನ ಶಿಪ್ಪಿಂಗ್(Mallikarjun Shiffing) ಕಂಪನಿ ಮೂಲಕ ಅಂಕೋಲಾ(Ankola) ತಾಲೂಕಿನ ಬೆಲೇಕೇರಿ(Belekeri) ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿದ್ದರು. ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ(Santosh Hegde) ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಮತ್ತು ಸುಮಾರು 44 ಕೋಟಿ ದಂಡ ವಿಧಿಸಿತ್ತು. ಜೈಲು ಸೇರಿದ್ದ ಸೈಲ್ ಅವರು ಹೈಕೋರ್ಟ್(Highcourt) ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ನಂತರವ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.
ಬುಧವಾರದಂದು ಇಡಿ ಅಧಿಕಾರಿಗಳ ತಂಡ ಕರ್ನಾಟಕ(Karnataka), ಗೋವಾ(Goa) ಮತ್ತು ಮುಂಬೈನ(Mumbai) ಕೆಲ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಅದಿರು ಅಕ್ರಮ ಸಾಗಾಟದಿಂದ ಬೊಕ್ಕಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.
ಇದನ್ನು ಓದಿ : ವಾಯುಭಾರ ಕುಸಿತ ಹಿನ್ನಲೆ. ಭಾರೀ ಗಾಳಿ ಬೀಸುವ ಸಾಧ್ಯತೆ. ಸಾರ್ವಜನಿಕರಿಗೆ ಎಚ್ಚರಿಕೆ.