ತೆಲಂಗಾಣ(Telangana) : ಮಂಚೇರಿಯಾ ಪಟ್ಟಣದ ಚೆನ್ನೂರು ಪದ್ಮನಗರ(Padmanagara) ಕಾಲೋನಿಯಲ್ಲಿ ಶುಕ್ರವಾರ 12 ವರ್ಷದ ಬಾಲಕಿ ಹೃದಯಾಘಾತದಿಂದ (Cardiac arrest ) ಮೃತಪಟ್ಟ ದಾರುಣ ಘಟನೆ(Shocking  incident) ನಡೆದಿದೆ.

ಬಡಾವಣೆಯ ಶ್ರೀನಿವಾಸ್-ರಾಮ ದಂಪತಿಯ ಪುತ್ರಿ ನಿವೃತ್ತಿ ಮೃತಪಟ್ಟ ಬಾಲಕಿ. ಚೆನ್ನೂರು ಪಟ್ಟಣದ ಸ್ಥಳೀಯ ಶಾಲೆಯೊಂದರಲ್ಲಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ನಿವೃತ್ತಿಗೆ ಕಾರ್ತಿಕ ಹುಣ್ಣಿಮೆ(Kartika Hunnime) ಇದ್ದ ಕಾರಣ ಶಾಲೆಗೆ ರಜೆ (School Holiday) ನೀಡಲಾಗಿತ್ತು.

ಹಬ್ಬದ ಖುಷಿಯಲ್ಲಿದ್ದ ನಿವೃತ್ತಿ ಮನೆಯಲ್ಲಿ ದಿಢೀರ್ ಕುಸಿದು ಬಿದ್ದಳು. ಇದನ್ನು ಗಮನಿಸಿದ ಮನೆಯವರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಕೆ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ್ದಾಗಿ  ತಿಳಿದುಬಂದಿದೆ.

ಸಾವಿನ ಸುದ್ದಿ ಕೇಳಿ ಶಾಲಾ ಶಿಕ್ಷಕರು ಹಾಗೂ ಸಹ ವಿದ್ಯಾರ್ಥಿಗಳು ಕಣ್ಣೀರಿಟ್ಟು ನಿವೃತಿ ಅವರಿಗೆ ಶೃದ್ದಾಂಜಲಿ(Tribute) ಸಲ್ಲಿಸಿದರು.

ಇದನ್ನು ಓದಿ : ಏಕ ರೀತಿ, ಏಕ ಭಾಷೆ ಕಾನೂನು ಬದ್ಧವಾಗಲಿ

ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ಬಂಧನ